ಒಂದು ಬಾರಿ ಅವಶ್ಯಕವಾಗಿ ಇದನ್ನು ಓದಿ ಮತ್ತು ಯೋಚಿಸಿ
ನಮ್ಮ ಜನ್ಮವು ಶ್ರೀಮಂತ, ಮಧ್ಯಮ ಮತ್ತು ಬಡವರ ಮನೆಯಲ್ಲಿ ಹೇಗೆ ನಿರ್ಧರಿತವಾಗುತ್ತದೆ?
ಇದು ಯಾಕೇ ಹೀಗೆ ಆಗುತ್ತದೆ –
- ಒಂದು ಮಗು ಶ್ರೀಮಂತರ ಮನೆಯಲ್ಲಿ ಹುಟ್ಟುತ್ತದೆ ಮತ್ತು ಹುಟ್ಟುತ್ತಲೇ ಕೋಟಿಗಟ್ಟಲೇ ಸಂಪತ್ತಿನ ಒಡೆಯನಾಗುತ್ತಾನೆ.
- ಎರಡನೇಯದಾಗಿ – ಇನ್ನೊಂದು ಮಗು ಮಧ್ಯಮ ವರ್ಗದ ಮನೆಯಲ್ಲಿ ಜನಿಸುತ್ತದೆ ಮತ್ತು ದೊಡ್ಡದಾಗಿ ಅದು ಸಂಘರ್ಷದ ಜೀವನ ನಡೆಸುತ್ತದೆ.
- ಮೂರನೇಯದಾಗಿ – ಮತ್ತೊಂದು ಮಗು ರಸ್ತೆಯಲ್ಲಿ ಜನನವಾಗುತ್ತದೆ ಒಂದು ಹೊತ್ತಿನ ಹಾಲಿಗೂ ಪರದಾಡಬೇಕಾಗುತ್ತದೆ.
ಈ ಮೂರು ಮಕ್ಕಳಲ್ಲಿ ಯಾವ ಕರ್ಮವು ಇರದಿದ್ದರೆ ಇವರಲ್ಲಿ ಭೂಮಿ ಮತ್ತು ಆಕಾಶದ ಅಂತರವೇಕೆ? ಇದು ಈ ಮಕ್ಕಳ ಹಿಂದಿನ ಜನ್ಮದ ಕರ್ಮದ ಲೆಕ್ಕದ ಪರಿಣಾಮವಾಗಿದೆ.
ವಿವಿಧ ರೀತಿಯ ಕಷ್ಟಗಳು ಏಕೆ ಬರುತ್ತವೆ?
ಎಲ್ಲರಿಗೂ ಯಾವುದಾದರೊಂದು ರೀತಿಯ ಪ್ರಕಾರದ ಕಷ್ಟಗಳಿರುತ್ತವೆ – ಶಾರೀರಿಕ ರೋಗಗಳು, ಮಾನಸಿಕ ರೋಗಗಳು, ಮನೆಯ ಅಥವಾ ಕಛೇರಿಯ ಸಮಸ್ಯೆಗಳು, ಮಕ್ಕಳು ತಪ್ಪು ದಾರಿಯಲ್ಲಿ ಹೋಗುತ್ತಿರುವುದು, ಕುಟುಂಬದಲ್ಲಿ ನಶೆಯ ದಾಸರಾಗಿರುವುದು, ಪತಿ-ಪತ್ನಿ ಜಗಳ, ಆಸ್ತಿಯ ವಿಚಾರದಲ್ಲಿ ವ್ಯಾಜ್ಯ, ವ್ಯಾಪಾರದಲ್ಲಿ ನಷ್ಟ, ಸಾಲ ತೀರಿಸಲು ಆಗದ ಸ್ಥಿತಿ, ಅಪಘಾತದಲ್ಲಿ ಆಪ್ತರ ಮರಣ, ಸ್ವಂತ ಇಚ್ಛೆಗೆ ವಿರುದ್ಧವಾಗಿ ನೌಕರಿ ವರ್ಗಾವಣೆ, ಕೆಲಸದ ಸ್ಥಳಗಳಲ್ಲಿ ಮೇಲಾಧಿಕಾರಿಗಳಿಂದ ಕಿರುಕುಳ, ಆತ್ಮವಂಚನೆ ಮಾಡಿಕೊಂಡು ತಪ್ಪು ಕೆಲಸ ಮಾಡುವುದು ಇತ್ಯಾದಿ.
ನಾವು ಯಾವ ರೀತಿ ಭ್ರಮಿತರಾಗುತ್ತಿದ್ದೇವೆ?
ನಮ್ಮಲ್ಲಿ ಯಾರಾದರೂ ದುಃಖಿತರಾಗಿ ಬದುಕಲು ಬಯಸುವಿರಾ? ಅಥವಾ ಗೊತ್ತಿದ್ದರೂ ನಾವು ಕೆಲಸವನ್ನು ತಪ್ಪಾಗಿ ಮಾಡಲು ಬಯಸುವಿರಾ?. ಆದರೆ ಇಂದು ಹೆಚ್ಚಾದ ನಮ್ಮ ಅವಶ್ಯಕತೆ ಮತ್ತು ಪ್ರಚಾರದ ಪ್ರವೃತ್ತಿಯ ಕಾರಣ ನಾವು ಕೆಟ್ಟ ಕರ್ಮಗಳನ್ನು ಮಾಡುತ್ತಾ ಬಂದಿದ್ದೇವೆ ಏಕೆಂದರೆ ಮನುಷ್ಯನಿಗೆ ಭಗವಂತನ ಶಕ್ತಿಯ ಆಂತರಿಕ ಅನುಭವ ಆಗುತ್ತಿಲ್ಲ. ಪರಮಾತ್ಮನ ಭಯವಿಲ್ಲ. ಭಗವಂತನನ್ನು ಉಪವಾಸ, ದಾನ,ದಕ್ಷಿಣೆ, ಹಣ್ಣು ಕಾಯಿ , ಸಿಹಿವಸ್ತುಗಳು, ಧೂಪ, ಪೂಜೆಗಳಿಂದ ಸಂತೋಷಪಡಿಸಿ ಮುಕ್ತಿ ಪಡೆಯಬಹುದು ಎಂದು ಯೋಚಿಸುವರು. ನೀವೂ ಕೂಡ ಈ ಎಲ್ಲಾ ಪ್ರಯತ್ನಗಳನ್ನು ಮಾಡಿ ನೋಡಿರಬಹುದು. ಆದರೂ ನೀವು ಸಮಸ್ಯೆಯಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಏನಾದರೂ ನಮಗೆ ಸಮಸ್ಯೆ ಬಂದರೆ ಅದು ಹಿಂದಿನ ಜನ್ಮದ ಕರ್ಮ ಮತ್ತು ಭಗವಂತನ ಇಚ್ಛೆ ಎಂದು ನಮಗೆ ನಾವೇ ಸಮಾಧಾನ ಮಾಡಿಕೊಳ್ಳುತ್ತೇವೆ. ಕರ್ಮದ ಫಲ ಅನುಭವಿಸಲೇಬೇಕು ಎಂದು ಹೇಳುತ್ತೇವೆ. ನೀವು ಈ ರೀತಿ ಹೇಳಿಕೊಂಡು ನಿಮಗೆ ನೀವು ಭ್ರಮೆಯಲ್ಲಿ ಮುಳುಗುವಿರಿ. ನಾವು ಕರ್ಮಫಲವನ್ನು ಅನುಭವಿಸಲೇಬೇಕಾದರೆ ಮಂದಿರ, ಮಸೀದಿ, ಚರ್ಚ್, ಗುರುದ್ವಾರ ಮುಂತಾದ ಕ್ಷೇತ್ರಗಳಿಗೆ ಹೋಗುವ ಅವಶ್ಯಕತೆ ಇದೆಯಾ? ಬಿಸಿಯಾದ ವಸ್ತುವನ್ನು ನಾವು ಮುಟ್ಟಿದರೆ ನಮ್ಮ ಕೈ ಈ ಜನ್ಮದಲ್ಲೇ ಸುಡುತ್ತದೆ ಹೊರತು ಬೇರೆ ಜನ್ಮದಲ್ಲಿ ಸುಡುವುದಿಲ್ಲ. ಸತತವಾಗಿ ದುಶ್ಚಟ ಮಾಡಿದರೆ ಈ ಜನ್ಮದಲ್ಲೇ ಶರೀರ ರೋಗಗ್ರಸ್ಥವಾಗುತ್ತದೆ. ಅಜಾಗರೂಕತೆಯಿಂದ ವಾಹನ ಚಲಾಯಿಸಿದರೆ ಇದೇ ಜನ್ಮದಲ್ಲಿ ಅಪಘಾತವಾಗುತ್ತದೆ. ಅರ್ಥಾತ್ ಜೀವನದ ಅಧಿಕ ಕಷ್ಟಗಳು ಈ ಜೀವನದಲ್ಲಿ ಮಾಡುವ ಕರ್ಮಗಳಿಂದಲೇ ಬರುತ್ತವೆ.
ನಮ್ಮ ಕರ್ಮಫಲಗಳು ಮುಂದಿನ ಜನ್ಮವನ್ನು ಹೇಗೆ ಪ್ರಭಾವಿಸುತ್ತದೆ?
ನಮ್ಮಲ್ಲಿ ಒಂದು ಪ್ರಶ್ನೆ ಬರುತ್ತದೆ ನಮ್ಮ ಕರ್ಮದ ಫಲವು ತ್ವರಿತವಾಗಿ ನಮಗೆ ದೊರೆತರೆ ವರ್ತಮಾನದ ಮತ್ತು ಹಿಂದಿನ ಜನ್ಮದ ಕರ್ಮಗಳ ಪರಿಣಾಮಗಳು ಹೇಗೆ ಪ್ರಭಾವಿಸುತ್ತದೆ. ಮನುಷ್ಯನು ತನ್ನ ಜನನ ಮತ್ತು ಮರಣದ ನಡುವೆ ಮಾಡುವ ಕರ್ಮಗಳ ಫಲವನ್ನು ಈ ಜನ್ಮದಲ್ಲೇ ಅಥವಾ ಪೂರ್ತಿಫಲವನ್ನು ಅನುಭವಿಸದಿದ್ದರೆ ಇನ್ನೊಂದು ಜನ್ಮಕ್ಕೆ ವರ್ಗಾವಣೆಯಾಗುತ್ತದೆ. ಹಿಂದಿನ ಜನ್ಮದ ಕರ್ಮದ ಆಧಾರದ ಮೇಲೆಯೇ ನಮಗೆ ಈ ಜನ್ಮದಲ್ಲಿ ಅಂತಹ ಮನೆಯಲ್ಲೇ ಜನನವಾಗುತ್ತದೆ. ವರ್ತಮಾನದ ನಮ್ಮ ಜನ್ಮವು ಹಿಂದಿನ ಜನ್ಮದ ಸಂಚಿತ ಕರ್ಮದ ಆಧಾರದ ಮೇಲೆ ಆಧಾರಿತವಾಗಿದೆ.
ಈ ಮಾತನ್ನು ಒಂದು ಉದಾಹರಣೆ ಮೂಲಕ ನೋಡೋಣ.
ರೈತನು ಬೆಳೆದ ಫಸಲು ಚೆನ್ನಾಗಿ ಬಂದರೆ ಒಂದು ವರ್ಷ ಆತ ಉಪಯೋಗಿಸಬಹುದು. ಇನ್ನೂ ಚೆನ್ನಾಗಿ ಫಸಲು ಬಂದರೆ ಮುಂದಿನ ವರ್ಷಕ್ಕೂ ಆತ ಬಳಸಬಹುದು ಮತ್ತು ಮಾರಾಟ ಮಾಡಬಹುದು. ಒಂದು ವೇಳೆ ರೈತ ಬೆಳೆದ ಫಸಲು ಹಾಳಾದರೆ ಆತನಿಗೆ ಅದರ ನಷ್ಟವನ್ನು ಅದೇ ವರ್ಷ ಅನುಭವಿಸಬೇಕಾಗಬಹುದು ಇಲ್ಲವೇ ಮುಂದಿನ ವರ್ಷಗಳಲ್ಲೂ ಅನುಭವಿಸಬೇಕಾಗುತ್ತದೆ.
ಈ ಪ್ರಕಾರ ನಮ್ಮ ಜೀವನದ ಎಲ್ಲಾ ಒಳ್ಳೆಯ ಅಥವಾ ಕೆಟ್ಟ ಕರ್ಮದ ಫಲಗಳು ಈ ಜನ್ಮದಲ್ಲೇ ಬಹುತೇಕ ಒಳ್ಳೆಯ ಅಥವಾ ಕೆಟ್ಟ ರೂಪದಲ್ಲಿ ಸಿಗುತ್ತದೆ. ನಮ್ಮ ಕರ್ಮ ಫಲಗಳನ್ನು ಇಂದಿನ ಜನ್ಮದಲ್ಲಿ ಪೂರ್ಣವಾಗಿ ಅನುಭವಿಸಲು ಸಾಧ್ಯವಾಗದಿದ್ದರೆ ಅದನ್ನು ಮುಂದಿನ ಜನ್ಮದಲ್ಲಿ ಅನುಭವಿಸಬೇಕಾಗುತ್ತದೆ.
ಕರ್ಮಗಳು ಒಳ್ಳೆಯ ಮತ್ತು ಕೆಟ್ಟ ಕರ್ಮಗಳಾಗಿ ಹೇಗೆ ಮಾರ್ಪಾಡಾಗುತ್ತವೆ
ನಮ್ಮ ಕರ್ಮಗಳು ಹೇಗೆ ಒಳ್ಳೆಯ ಅಥವಾ ಕೆಟ್ಟ ಕರ್ಮಗಳಾಗುತ್ತವೆ ಹಾಗೆಯೇ ಇದರ ಫಲಗಳು ಹೇಗೆ ಮುಂದಿನ ಜನ್ಮಕ್ಕೆ ವರ್ಗಾವಣೆಯಾಗುತ್ತದೆ. ಒಂದು ಮಗುವಿನ ಜನ್ಮವಾಗುತ್ತಿದ್ದಂತೆ ಬುದ್ಧಿಯೂ ಸಿಗುತ್ತದೆ.ನಾವು ಈ ಬುದ್ಧಿ, ಶರೀರ, ಹಣ , ಅಧಿಕಾರ, ಅಂತಸ್ತನ್ನು ಹೇಗೆ ಉಪಯೋಗಿಸುತ್ತಿದ್ದೇವೆ ಎಂಬುದರ ಬಗ್ಗೆ ನಮ್ಮ ಕರ್ಮಗಳು ನಿರ್ಧರಿತವಾಗುತ್ತವೆ. ನಾವು ಇದನ್ನು ಸದುಪಯೋಗ ಅಥವಾ ದುರುಪಯೋಗ ಮಾಡುವುದರ ಮೇಲೆ ನಿರ್ಧರಿತವಾಗುತ್ತದೆ. ನಾವು ಈ ಜನ್ಮದಲ್ಲಿ ನಿಮಗಾಗಿ ಮಾತ್ರ ನೀವು ಜೀವಿಸಿರಬಹುದು ಅಥವಾ ಇತರರಿಗಾಗಿ ಜೀವಿಸಿದ್ದೀರೋ ಎನ್ನುವುದರ ಕರ್ಮಫಲದ ಆಧಾರದ ಮೇಲೆ ಮುಂದಿನ ಜನ್ಮ ನಿರ್ಧರಿತವಾಗುತ್ತದೆ.
ಈ ಜೀವನದಲ್ಲೇ ಉತ್ಥಾನ ಮತ್ತು ಪತನ ಎರಡೂ ಸಂಭವವಿದೆಯೆ?
ಪರಮಾತ್ಮನ ಕೃಪೆ ಎಲ್ಲರ ಮೇಲೆ ಒಂದೇ ರೀತಿಯಲ್ಲಿರುತ್ತದೆ. ನಾನು ನಮ್ಮ ಅಂತರಾತ್ಮದ ಧ್ವನಿಯನ್ನು ಕೇಳಿ ಅತನ ಕಡೆ ನಡೆದರೆ ಎಲ್ಲರಿಗೂ ಮುನ್ನಡೆಯುವ ಅವಕಾಶ ಸಿಗುತ್ತದೆ. ಇಂದಿನ ಜನ್ಮದಲ್ಲಿ ಮಾಡಿದ ಕರ್ಮಫಲಗಳ ಆಧಾರದ ಮೇಲೆ ಸುಖೀ ವ್ಯಕ್ತಿಯು ಇನ್ನೊಂದು ಜನ್ಮದಲ್ಲಿ ದುಃಖಿಯಾಗಿ ಹುಟ್ಟಬಹುದು ಹಾಗೆಯೇ ದುಃಖಿ ವ್ಯಕ್ತಿಯು ಸುಖೀ ಕುಟುಂಬದಲ್ಲಿ ಜನಿಸಬಹುದು. ಪ್ರಾರ್ಥನೆ, ಸಾಧನೆ, ಒಳ್ಳೆಯ ಕರ್ಮಗಳನ್ನು ಮಾಡಿ ಇಂದಿನ ಜನ್ಮವನ್ನು ಸುಧಾರಣೆ ಮಾಡಿಕೊಳ್ಳಬಹುದು. ಈ ಮೂಲಕ ಮುಂದಿನ ಜನ್ಮದ ಉತ್ಥಾನದ ಮಾರ್ಗದಲ್ಲಿ ನಡೆಯುತ್ತೇವೆ. ಹೇಗೆ ನಮಗೆ ಬಿಸಿಲು, ಮಳೆ, ಗಾಳಿಯು ಸಮಾನ ರೂಪದಲ್ಲಿ ಸಿಗುತ್ತದೆಯೋ ಇದೇ ರೀತಿ ಸಾಧನೆ ಮಾಡಿ ಮುನ್ನಡೆಯುವ ಅವಕಾಶ ಎಲ್ಲರಿಗೂ ಸಮಾನವಾಗಿ ಸಿಗುತ್ತದೆ. ಆದರೆ ನಾವು ಸಮಯದ ಅಭಾವದಿಂದ ಈ ನಿಯಮ, ಸಾಧನೆಗಳನ್ನು ಪೂರ್ಣ ಪಾಲನೇ ಮಾಡದೇ ಅನೇಕ ಆಡಂಬರದ ಆಚರಣೆಗಳಿಂದ ಸಮಯವನ್ನು ಹಾಳು ಮಾಡುತ್ತಿದ್ದೇವೆ.
ನಾವು ಯಾವ ಯಾವ ತಪ್ಪುಗಳನ್ನು ಮಾಡುತ್ತಾ ಕೆಟ್ಟ ಕರ್ಮಗಳನ್ನು ಸೃಷ್ಟಿಸುತ್ತಿದ್ದೇವೆ?
ಯಾರಿಗಾದರೂ ಯಾವುದೇ ರೀತಿಯಲ್ಲಿ ಅನ್ಯಾಯ ಮಾಡುವುದು. ಸುಳ್ಳು ಆರೋಪ ಮಾಡಿ ಇತರರನ್ನು ಹಿಂಸೆ ಮಾಡುವುದು. ಅನೈತಿಕ ಸಂಪಾದನೆ, ಲಂಚ ತೆಗೆದುಕೊಳ್ಳುವುದು. ಅಧಿಕಾರದ ದುರುಪಯೋಗ, ಅಶಕ್ತರನ್ನು ದುರುಪಯೋಗಪಡಿಸಿಕೊಳ್ಳುವುದು. ಸಹೋದ್ಯೋಗಿಯೊಂದಿಗೆ ದುರ್ವರ್ತನೆ, ಕಲಬೆರಕೆ ವಸ್ತುಗಳನ್ನು ಮಾರಾಟ ಮಾಡುವುದು, ಮೋಸ ಮಾಡಿ ವ್ಯವಹಾರ ಮಾಡುವುದು, ಭಗವಂತನ ಹೆಸರಿನಲ್ಲಿ ಭಯಪಡಿಸುವುದು, ದಾನ ದಕ್ಷಿಣೆ ತೆಗೆದುಕೊಳ್ಳುವುದು, ಕೆಲಸಗಾರರ ಶೋಷಣೆ ಮಾಡುವುದರಿಂದ ಅವರು ಚಿಕ್ಕ ವಯಸ್ಸಿನಲ್ಲಿಯೇ ರೋಗಗ್ರಸ್ಥರಾಗುತ್ತಾರೆ. ( ಚಿಂತೆ,ರಕ್ತದೊತ್ತಡ, ಹೃದಯಾಘಾತ, ಸಕ್ಕರೆ ಖಾಯಿಲೆ ಇತ್ಯಾದಿ. ) ಅದೇ ರೀತಿ ಶೋಷಣೆ ಮಾಡುವ ಅಧಿಕಾರಿಗಳೂ ಸಹಾ ಸಮಸ್ಯೆಗೆ ಸಿಲುಕುತ್ತಾರೆ. ನಾವು ಇದನ್ನೆಲ್ಲಾ ಗೊತ್ತಿದೆಯೋ ಅಥವಾ ಗೊತ್ತಿಲ್ಲದೆಯೋ ಅನೇಕ ಕರ್ಮಗಳನ್ನು ಮಾಡುತ್ತೇವೆ. ನಾವು ಕರ್ಮಫಲಗಳನ್ನು ಯಾವುದಾದರೂ ರೂಪದಲ್ಲಿ ಅನುಭವಿಸಲೇಬೇಕು. ಏಕೆಂದರೆ ಎಲ್ಲಾ ಕರ್ಮಫಲ ನಿಶ್ಚಿತವಾಗಿದೆ. ಇಂದು ಎಲ್ಲಾಕಡೆ ಸೇವಾಶುಲ್ಕ ಅಥವಾ ಲಂಚ ತೆಗೆದುಕೊಳ್ಳದೇ ಕೆಲಸ ಮಾಡುವುದಿಲ್ಲ. ಹಲವು ಬಾರಿ ಪರಮಾತ್ಮನ ಸೇವೆಗಾಗಿ ಸೇವಾಶುಲ್ಕ ಪಡೆಯುತ್ತಿದ್ದೇವೆ. ಸೇವೆಗೆ ಸಂಗ್ರಹವಾದ ಹಣವನ್ನು ಸ್ವಂತ ಉಪಯೋಗಕ್ಕೆ ಬಳಸಿಕೊಳ್ಳುವುದು. ಈ ರೀತಿಯ ಭ್ರಷ್ಟಾಚಾರ ಮೇಲಿಂದ ಕೆಳಗೆ ಎಲ್ಲಾ ಸ್ಥಳಗಳ್ಲೂ ನಡೆಯುತ್ತಿದೆ.
ನಾವು ಕರ್ಮಫಲದ ಭಾಗಿದಾರರು ಹೇಗಾಗುತ್ತೇವೆ?
ನಾವು ಕೆಲವೊಂದು ಕೆಲಸಗಳು ತಪ್ಪೆಂದು ಗೊತ್ತಿದ್ದರೂ ಆ ಕೆಲಸಗಳನ್ನು ಮಾಡುತ್ತೇವೆ. ಮೇಲಾಧಿಕಾರಿಗಳು ಸರಿಯಿಲ್ಲದ ಕೆಲಸಗಳನ್ನು ಮಾಡಲು ಒತ್ತಡ ಹಾಕಿದಾಗ ನಾವು ಆ ಕೆಲಸಕ್ಕೆ ಸಹಾಯ ಮಾಡುತ್ತೇವೆ. ಆಗ ಮೇಲಾಧಿಕಾರಿಯು ಆ ಕರ್ಮದ ಫಲ ಅನುಭವಿಸಬೇಕು ಜೊತೆಗೆ ನಾವು ಕೂಡ ಆ ಕರ್ಮಫಲಕ್ಕೆ ಭಾಗಿದಾರರಾಗುತ್ತೇವೆ. ನಾವೂ ಕೂಡ ಅವರ ಜೊತೆಗೆ ಇಂತಹ ಕೆಲಸವನ್ನು ಮಾಡಿ ನಾವು ಕೆಟ್ಟ ಕರ್ಮಫಲಕ್ಕೆ ಒಳಗಾಗುತ್ತೇವೆ. ನಾವು ನೆನಪಿಡಬೇಕು ಏನೆಂದರೆ ಬೇರೆಯವರ ಮಾಡುವ ಕೆಟ್ಟ ಕೆಲಸದಲ್ಲಿ ಭಾಗಿಯಾದರೆ ನಾವೂ ಕೂಡ ಅದರ ಫಲವನ್ನು ಅನುಭವಿಸಬೇಕಾಗುತ್ತದೆ. ನಾವು ಕೇಳದಿದ್ದರೂ ಹಣ ನೀಡಿ ಹೋಗುತ್ತಾರೆ ಎಂದು ಅಧಿಕಾರಿಗಳು ಹೇಳುತ್ತಾರೆ ಆದರೆ ಇದು ಅವರಿಗೆ ಅವರು ಮೋಸಮಾಡಿಕೊಳ್ಳುವ ವಿಧಾನ. ಭ್ರಷ್ಟಾಚಾರದಿಂದ ಬಳಲಿರುವ ವ್ಯಕ್ತಿಯು ಮುಂದಿನ ಕೆಲಸವನ್ನು ಮಾಡಿಕೊಡುವುದಿಲ್ಲ ಎಂದು ಭಯಪಟ್ಟು ಅಧಿಕಾರಿಗೆ ಲಂಚ ನೀಡುತ್ತಾನೆ. ನಾವು ಖುಷಿಪಟ್ಟು ಲಂಚ ಪಡೆದು ನಮ್ಮ ಕರ್ಮವನ್ನು ಭ್ರಷ್ಟಮಾಡಿಕೊಳ್ಳುತ್ತಿದ್ದೇವೆ.
ಭ್ರಷ್ಟರಾದವರೂ ಕೂಡ ಸಂಪನ್ನರಂತೆ ಏಕೆ ಕಾಣಿಸುತ್ತಾರೆ?
ನಾವು ನೋಡುತ್ತಾ ಬರುತ್ತಿದ್ದೇವೆ ಏನೆಂದರೆ ಭ್ರಷ್ಟರು ನಮಗೆ ಸಂಪನ್ನರಾಗಿ ಕಾಣುತ್ತಾರೆ. ಅವರನ್ನು ಯಾರೂ ಏನೂ ಮಾಡಲಾಗುವುದಿಲ್ಲ. ಇದು ಅವರ ಹಿಂದಿನ ಜನ್ಮದ ಸಂಚಿತ ಕರ್ಮದ ಫಲದ ಪರಿಣಾಮವಾಗಿದೆ. ಆದರೆ ಅಷ್ಟೇ ಬೇಗ ತಮ್ಮ ಪತನದ ಮಾರ್ಗವನ್ನು ಕೂಡ ಸಮೀಪಿಸುತ್ತಿರುತ್ತಾರೆ. ಆ ಜನರು ತಮ್ಮ ಹಿಂದಿನ ಜನ್ಮದಲ್ಲಿ ಮಾಡಿದ ಪುಣ್ಯದ ಕೊಡವನ್ನು ಖಾಲಿ ಮಾಡಿಕೊಳ್ಳುವರು. ಕೆಟ್ಟ ಕರ್ಮಗಳನ್ನು ಮಾಡಿ ಹಣ ಸಂಪಾದಿಸಿ ದಾನ ಧರ್ಮ, ಪೂಜಾ ಭಜನೆ , ತೀರ್ಥಯಾತ್ರೆ ಮಾಡಿದರೆ ಏನೂ ಪ್ರಯೊಜನವಿಲ್ಲ. ಕೆಟ್ಟ ಕೆಲಸಗಳನ್ನು ಬೇರೆಯವರೊಂದಿಗೆ ಮುಚ್ಚಿಟ್ಟರೂ ನಮ್ಮೊಳಗಿರುವ ಪರಮಾತ್ಮ ನೋಡುತ್ತಿರುತ್ತಾನೆ. ಕರ್ಮಫಲವನ್ನು ಅನುಭವಿಸಲೇಬೇಕು.
ಹೇಗೆ ತಪ್ಪುಗಳಾಗುತ್ತಾ ಹೋಗುತ್ತಿದೆ ಯೋಚಿಸಿ?
ಹಣವೇ ಸರ್ವಸ್ವ ಎಂದು ಮನುಷ್ಯನು ಆಲೋಚಿಸುವನು. ಆದ್ದರಿಂದ ಹೆಚ್ಚು ಹೆಚ್ಚು ಹಣ ಸಂಪಾದಿಸಲು ಬಯಸುತ್ತಾನೆ. ಆದರೆ ಕೆಟ್ಟ ಮಾರ್ಗದಲ್ಲಿ, ಯಾರಿಗಾದರೂ ಮೋಸ ಮಾಡಿ, ಯಾರ ಹೃದಯವನ್ನು ನೋಯಿಸಿ,ಅಧಿಕಾರದ ದುರುಪಯೋಗ ಮಾಡಿಕೊಂಡು ಸಂಪಾದಿಸಿದ ಹಣ ದುಃಖಕ್ಕೆ ಕಾರಣವಾಗುತ್ತದೆ. ಇದು ನಿಶ್ಚಿತವಾಗಿದೆ. ನಾವು ಯಾವುದಾದರೂ ಮನೆಯ ಕೆಲಸವನ್ನು ಪೂರ್ಣಗೊಳಿಸಲು ಹೆಚ್ಚು ಹಣ ಸಂಪಾದಿಸಲು ನಮ್ಮ ಅಂತರಾತ್ಮದ ವಿರುದ್ಧವಾಗಿ ಅನ್ಯಾಯದ ಕೆಲಸ ಮಾಡುತ್ತೇವೆ. ಇದರಿಂದ ನಾವು ಮುಂದೆ ಬರುವ ಕಷ್ಟಗಳನ್ನು ಎದುರಿಸಲು ತಯಾರಾಗಬೇಕಾಗುತ್ತದೆ. ನಾವು ಅನ್ಯಾಯವಾಗಿ ಹಣ ಸಂಪಾದಿಸಿದರೆ ಅದು ಬಡ್ಡಿ ಸಮೇತ ಸಮಸ್ಯೆಗಳ ರೂಪದಲ್ಲಿ ವ್ಯಯವಾಗುತ್ತದೆ. ನಮ್ಮ ಮಕ್ಕಳು ದುರ್ಜನರ ಸಂಗ ಮಾಡಿ ಎಲ್ಲವನ್ನು ನಾಶ ಮಾಡುವರು. ನಮಗೆ ಹಲವು ಪ್ರಕಾರದ ಶಾರೀರಿಕ, ಮಾನಸಿಕ ರೋಗಗಳು, ಚಿಂತೆಗಳು ಆವರಿಸುತ್ತವೆ. ಹಲವು ಬಾರಿ ನಾವು ಹೇಳುವೆವು ನಮ್ಮ ಬಳಿ ಹಣವಿದ್ದರಿಂದ ಕಷ್ಟದಲ್ಲಿ ಸಹಾಯಕ್ಕೆ ಬಂದಿತು. ಆದರೆ ನಾವು ಕಷ್ಟಗಳು ಏಕೆ ಬಂದವು ಎಂದು ಯೋಚಿಸುವುದನ್ನು ಮರೆಯುತ್ತೇವೆ. ಹಾಗಾದರೆ ಅನ್ಯಾಯದ ಮಾರ್ಗದಲ್ಲಿ ಸಂಪಾದಿಸದಿದ್ದರೆ ಕಷ್ಟಗಳು ಬರುವುದಿಲ್ಲವೇ? ಬರುವ ಎಲ್ಲಾ ಕಷ್ಟಗಳು ನಮ್ಮ ಕರ್ಮದ ಫಲಗಳು. ಕರ್ಮಫಲದ ಈ ಪುಸ್ತಕ ಕೇವಲ ಅನ್ಯಾಯದ ಸಂಪಾದನೆಗೆ ಮಾತ್ರ ಸೀಮಿತವಾಗಿಲ್ಲ. ನಾವು ಅಧಿಕಾರ ಮತ್ತು ಸಂಪತ್ತಿನ ಅಹಂಕಾರದಿಂದ ಯಾರನ್ನಾದರೂ ನೋಯಿಸಿದರೆ , ಅಪಮಾನ ಮಾಡಿದರೆ ನಮಗೆ ಬೇರೆಯವರಿಂದ ಅದೇ ದುಃಖ, ಅಪಮಾನ, ಕೋಪವೇ ಸಿಗುತ್ತದೆ. ಆಶೀರ್ವಾದವು ನಮಗೆ ಹೇಗೆ ರಕ್ಷಿಸುತ್ತದೆಯೋ ಹಾಗೆಯೇ ಅಶಕ್ತರ, ಬಡವರ, ನೋಯಿಸಿದವರ ಕಣ್ಣೀರು ನಮ್ಮನ್ನು ಅಷ್ಟೇ ಕಾಡುತ್ತದೆ.
ತಪ್ಪು ಮಾಡುವುದರಿಂದ ನಮ್ಮನ್ನು ನಾವು ಹೇಗೆ ತಡೆಯಬಹುದು?ಯಾವುದು ಸರಿ? ಯಾವುದು ತಪ್ಪು?
ಯಾವುದು ಕೆಟ್ಟದ್ದು? ನಮಗೆ ಹೇಗೆ ತಿಳಿಯುತ್ತದೆ. ಪರಮಾತ್ಮನ ಶಕ್ತಿ ಹೊರಗೆ ಎಷ್ಟಿದೆಯೋ ನಮ್ಮೊಳಗೂ ಅಷ್ಟೇ ಇದೆ. ಆ ಶಕ್ತಿ ನಮಗೆ ಯಾವಾಗಲೂ ಸರಿ ಅಥವಾ ತಪ್ಪು ಎನ್ನುವ ಸೂಚನೆಯನ್ನು ನೀಡುತ್ತದೆ ಅದನ್ನು ಅಂತರಾತ್ಮದ ಧ್ವನಿ ಎನ್ನುತ್ತೇವೆ. ಒಂದು ವೇಳೆ ನಾವು ಈ ಅಂತರಾತ್ಮದ ದ್ವನಿಯನ್ನು ಕೇಳಿಸಿಕೊಂಡರೆ ನಾವು ಯಾವಾಗಲೂ ಯಾವ ಕೆಟ್ಟ ಕರ್ಮವನ್ನು ಮಾಡುವುದಿಲ್ಲ. ಒಳ್ಳೆಯ ಕರ್ಮಗಳನ್ನು ಮಾಡಿದರೆ ಈ ಜೀವನದಲ್ಲಿ ಸಮಸ್ಯೆಗಳು ಪದೇ ಪದೇ ಬರುವುದಿಲ್ಲ. ನಾವು ಈ ಧ್ವನಿಯನ್ನು ಕೇಳಿಸಿಕೊಳ್ಳದಿದ್ದರೆ ಕಷ್ಟಗಳು ಒಂದರ ಹಿಂದೆ ಒಂದರಂತೆ ಪ್ರಾರಂಭವಾಗುತ್ತವೆ. ನಾವು ಅಂತರಾತ್ಮದ ಧ್ವನಿಯನ್ನು ಅನುಸರಿಸಿದರೆ ನಮಗೆ ಅಗತ್ಯ ಕೆಲಸಗಳಿಗೆ ಕೆಟ್ಟ ಮಾರ್ಗಗಳನ್ನು ಮಾಡಲು ಯತ್ನಿಸಿದರೆ ಪರಮಾತ್ಮನ ಕೃಪೆಯಿಂದ ಅವು ಸ್ವಯಂ ಪೂರ್ತಿಯಾಗುವವು. ಆಗ ನಮ್ಮ ಕೆಲಸದ ಪೂರ್ಣ ಜವಾಬ್ದಾರಿ ಪರಮಾತ್ಮನೇ ತೆಗೆದುಕೊಳ್ಳುತ್ತಾನೆ. ಯಾವಾಗಲೂ ಕೆಲಸದಲ್ಲಿ ಸಮಸ್ಯೆಗಳು ಎದುರಾಗುವುದಿಲ್ಲ.
ಎಲ್ಲಾ ತಿಳಿದಿದ್ದರೂ ತಪ್ಪುಗಳು ಏಕೆ ಮಾಡುತ್ತೇವೆ?
ನಾವು ತಪ್ಪು ಮಾಡುತ್ತಿದ್ದೇವೆ ಎಂದು ತಿಳಿದರೂ ಮತ್ತೆ ತಪ್ಪನ್ನೇ ಮಾಡುತ್ತೇವೆ. ಇದು ಏಕೆ? ಇದಕ್ಕೆ ಮೂಲ ಕಾರಣ ಕಾಮ, ಕ್ರೋಧ, ಲೋಭ, ಮಾಯ, ಅಹಂಕಾರ ಇವು ಜನನದಿಂದಲೇ ನಮ್ಮೊಳಗೆ ಅಡಗಿವೆ. ಇವುಗಳನ್ನು ನಮ್ಮ ಬುದ್ದಿಯಿಂದ ಗೆಲ್ಲುವುದು ಕಷ್ಟ. ಇವು ಯಾವುದೇ ಕಥೆ- ಪ್ರವಚನದಿಂದ ನಾಶವಾಗುವುದಿಲ್ಲ. ಇವೆಲ್ಲಾ ನಮ್ಮೊಳಗೆ ಹರಡಿರುವ ವೃತ್ತಿಗಳ ಪರಿಣಾಮವಾಗಿವೆ. ತಾಮಸಿಕ ವೃತ್ತಿಗಳ (ದುರಾಸೆ, ಸುಳ್ಳು, ವಾಸನೆ, ಆಲಸ್ಯ, ಅನಿಯಂತ್ರಿತ ನಶೆ, ಭ್ರಷ್ಟತೆ, ಇತ್ಯಾದಿ) ಕಾರಣದಿಂದ ಕೆಟ್ಟ ಕಾರ್ಯಗಳನ್ನು ಮಾಡುತ್ತಾ ಬಂದಿದ್ದೇವೆ. ನಮಗೆ ಪರಮಾತ್ಮನೊಂದಿಗೆ ಆಂತರಿಕ ಸಂಪರ್ಕವಾದರೆ ತಾಮಸಿಕ ಶಕ್ತಿಯು ಸಾತ್ವಿಕ ಶಕ್ತಿಯಾಗಿ ಪರಿವರ್ತಿತವಾಗುತ್ತದೆ. ಆಗ ಕೆಟ್ಟ ಕೆಲಸಗಳು ನಡೆಯುವುದೇ ಇಲ್ಲ. ಕೆಟ್ಟ ಕೆಲಸ ಮಾಡಬೇಕೆನಿಸಿದರೂ ಚೇತನ ಶಕ್ತಿ ನಮ್ಮನ್ನು ಎಚ್ಚರಗೊಳಿಸುತ್ತಿರುತ್ತದೆ. ತಪ್ಪುಗಳು ಸುಲಭವಾಗಿ ನಡೆಯುವುದಿಲ್ಲ. ಇದಕ್ಕಾಗಿ ನಾವು ಏನು ಮಾಡಬೇಕು?
ಪರಮಾತ್ಮನೊಂದಿಗೆ ಸಂಪರ್ಕ ಸಾಧಿಸಲು ಏನು ಮಾಡಬೇಕು?
ಪರಮಾತ್ಮನೊಂದಿಗೆ ಆಂತರಿಕ ಸಂಪರ್ಕ ಸಾಧಿಸಲು ನಾವು ಧ್ಯಾನ, ಪ್ರಾರ್ಥನೆ ಯಾವ ವಿಧಾನವನ್ನಾದರೂ ಅಭ್ಯಾಸ ಮಾಡಬಹುದು. ಆದರೆ ಎಲ್ಲಾ ಧ್ಯಾನ ವಿಧಾನದಲ್ಲೂ ಯಾವುದಾದರೊಂದು ಅಂಶಗಳನ್ನು ಬಿಡುವುದು ಮತ್ತು ಅಳವಡಿಸಿಕೊಳ್ಳಬೇಕಾಗುತ್ತವೆ. ಯಾವುದಾದರೊಂದು ಬಂಧನವಿರುತ್ತದೆ. ಈ ಕಾರಣದಿಂದ ನಾವು ಮುಂದುವರೆಯಲು ಸಾಧ್ಯವಾಗುವುದಿಲ್ಲ. ಆಧ್ಯಾತ್ಮಿಕ ಪ್ರಗತಿಯ ಪ್ರಬಲ ಇಚ್ಛೆಯಿದೆ ಆದರೆ ಏನು ಮಾಡಬೇಕೆಂದು ತಿಳಿಯುವುದಿಲ್ಲ. ಯಾವ ಮಾರ್ಗ ಸರಿಯಾಗಿದೆ? ಯಾವ ಮಾರ್ಗ ತಪ್ಪಾಗಿದೆ? ಎಂದು ತಿಳಿಯುವುದಿಲ್ಲ. ಸರಳವಾದ ಮತ್ತು ಸಹಜವಾದ ಮಾರ್ಗ ಹೇಗೆ ಸಿಗುತ್ತದೆ?. ಇದನ್ನು ಈ ಉದಾಹರಣೆಯ ಮೂಲಕ ಅರ್ಥಮಾಡಿಕೊಳ್ಳಬಹುದು.
ಒಂದು ಪರ್ವತವನ್ನು ಏರಲು ಹಲವಾರು ರಸ್ತೆಗಳಿರುತ್ತವೆ. ಮೆಟ್ಟಿಲುದಾರಿ, ಕಲ್ಲಿನದಾರಿ, ಮರಗಳ ಮಧ್ಯೆ ಸಣ್ಣ ದಾರಿ ಹೀಗೆ ಇತ್ಯಾದಿ. ಯಾವುದಾದರೂ ರಸ್ತೆಯಲ್ಲಿ ನಿರಂತರ ಚಲಿಸುತ್ತಿದ್ದರೆ ನಾವು ನಮ್ಮ ಲಕ್ಷ್ಯ ವನ್ನು ಮುಟ್ಟುತ್ತೇವೆ. ನಿರಂತರ ಚಲಿಸುವ ಅವಶ್ಯಕತೆ ಇದೆ. ಯಾತ್ರೆ ಮಧ್ಯೆದಲ್ಲೇ ನಿಂತರೆ ನಮ್ಮ ಅಂತಿಮ ಗುರಿ ತಲುಪಲಾಗುವುದಿಲ್ಲ. ನಾವು ಸೌಕರ್ಯಕ್ಕೆ ಅನುಗುಣವಾಗಿ ಯಾವ ಮಾರ್ಗವಾದರೂ ಅನುಸರಿಸಬಹುದು. ನಾವು ಮಾರ್ಗವನ್ನು ಆಗಾಗ್ಗೆ ಬದಲಿಸಬಹುದು ಆದರೆ ನಮ್ಮ ಯಾತ್ರೆ ನಿಲ್ಲಬಾರದು.
ಆದರೆ ಎಲ್ಲಾ ಮಾರ್ಗಗಳಲ್ಲಿ ಚಲಿಸಲು ತಮ್ಮದೇ ನಿಯಮಗಳಿವೆ, ಅದನ್ನು ಪಾಲಿಸುವುದು ಅವಶ್ಯಕ. ಮೆಟ್ಟಿಲು ಹತ್ತುವ ರಸ್ತೆಯಲ್ಲಿ ನಾವು ಎತ್ತರದ ಚಪ್ಪಲಿ ಹಾಕಿಕೊಂಡು ಹೋಗಲು ಆಗುವುದಿಲ್ಲ. ಕಲ್ಲಿನ ರಸ್ತೆ ಹತ್ತಲು ಚಪ್ಪಲಿ ಹಾಕಲಾಗುವುದಿಲ್ಲ.ಒಂದು ರಸ್ತೆಯಲ್ಲಿ ಕೋಲಿನ ಸಹಾಯ ಬೇಕಾಗುವುದು ಇನ್ನೊಂದು ರಸ್ತೆಯಲ್ಲಿ ಹಗ್ಗದ ಅವಶ್ಯಕತೆಯಿರುತ್ತದೆ. ಈ ಮಾರ್ಗಗಳಲ್ಲಿ ಜನರ ಯಾತ್ರೆಯು ಹಲವು ಕಾರಣಗಳಿಂದ ನಿಂತುಹೋಗುತ್ತದೆ. ಒಬ್ಬರಿಗೆ ಮಂಡಿನೋವಿನಿಂದ ಹತ್ತಲಾಗುವುದಿಲ್ಲ, ಇನ್ನೊಬ್ಬರಿಗೆ ಉಸಿರಾಟದ ಸಮಸ್ಯೆ, ಮತ್ತೊಬ್ಬರ ಬಳಿ ಸಮಯದ ಅಭಾವ, ಹೀಗೆ ನಾನಾ ಕಾರಣಗಳಿಂದ ಯಾತ್ರೆ ನಿಂತುಹೋಗುತ್ತದೆ. ಹಲವು ಬಾರಿ ನಾವು ಯಾತ್ರೆ ಮಧ್ಯೆದಲ್ಲೇ ಕೈಬಿಡುತ್ತೇವೆ.
ಈ ಪ್ರಕಾರ ಪರಮಾತ್ಮನ ತಲುಪಲು ಹಲವು ದಾರಿಗಳಿವೆ. ನಾವು ಯಾವ ಮಾರ್ಗ(ಮಂದಿರ, ಮಸೀದಿ, ಚರ್ಚ್, ಗುರುದ್ವಾರ ಇತ್ಯಾದಿ) ಅನುಸರಿಸಿದರೂ ಪರಮಾತ್ಮನ ಸ್ಥಾನದವರೆಗೆ ತಲುಪುವೆವು. ಪ್ರತಿಯೊಂದು ಪೂಜಾಪಾಠಕ್ಕೆ ತಮ್ಮದೇ ಅದ ನಿಯಮಗಳಿವೆ. ಅದರ ಪೂರ್ಣ ಪಾಲನೆ ಮಾಡಲಾಗದಿದ್ದರೆ ಅಂತಿಮ ಗುರಿ ತಲುಪಲಾಗುವುದಿಲ್ಲ, ನಾವು ಪರಮಾತ್ಮ ನಮ್ಮ ಮಾತನ್ನು ಕೇಳಿಸಿಕೊಳ್ಳುವುದಿಲ್ಲವೆಂದು ದೂಷಿಸುತ್ತೇವೆ. ಸಮಯದ ಅಭಾವದಿಂದ ನಾವು ಮಂದಿರ, ಮಸೀದಿ, ಚರ್ಚ್, ಗುರುದ್ವಾರ ಇತ್ಯಾದಿಗಳ ಮೂಲಕ ಹೇಳುವ ದಾರಿಯಲ್ಲಿ ಸಾಗಲು ಇರುವ ನಿಯಮಗಳನ್ನು ಪಾಲಿಸಲಾಗುವುದಿಲ್ಲ. ನಮಗೆ ಆ ದಾರಿಯ ಬಗ್ಗೆ ಸಂಶಯ ಬರುತ್ತದೆ. ಯಾವ ಪದ್ಧತಿಯು ತಪ್ಪಲ್ಲ. ಎಲ್ಲವೂ ಲಕ್ಷ್ಯದವರೆಗೆ ತಲುಪಿಸುತ್ತವೆ.
ಈ ಪ್ರಕಾರ ಗುರುಗಳ ಮೂಲಕ ಹೇಳುವ ಮಾರ್ಗದಲ್ಲಿಯೂ ಅನೇಕ ಬಂಧನಗಳಿರುತ್ತವೆ. ಈ ಕಾರಣದಿಂದ ಆ ಮಾರ್ಗದಲ್ಲಿ ಸಾಗಲು ನಿಯಮಗಳ ಪಾಲನೆ ಕಠಿಣವಾಗುತ್ತದೆ. ನಿಯಮ ಪಾನೆ ಮಾಡಲಾಗದೇ ಆ ಕಾರ್ಯದ ಜವಾಬ್ದಾರಿಯನ್ನು ಪೂಜಾರಿ, ಪಂಡಿತರು ಇವರ ಮೇಲೆ ಬಿಟ್ಟು ಬಿಡುವೆವು. ಇದರಿಂದ ನಮ್ಮ ಮನಸ್ಸಿನ ಇಚ್ಛಿತ ಫಲಗಳು ಹೇಗೆ ಸಿಗುತ್ತವೆ. ನಾವು ಯಾರಿಗಾದರೂ ಪ್ರೇಮಿಸಬೇಕಾದರೆ ನಾವು ಸ್ವಯಂ ಪ್ರೇಮಿಸುತ್ತೇವೆ.ಈ ಪ್ರೇಮದ ಮಧ್ಯೆ ಯಾರನ್ನೂ ತರುವುದಿಲ್ಲ. ಆದರೆ ಯಾವಾಗ ಪರಮಾತ್ಮನೊಂದಿಗೆ ಪ್ರೇಮ ವ್ಯಕ್ತ ಮಾಡುವ ಸಮಯ ಬಂದಾಗ ಇನ್ನೊಬ್ಬರಿಗೆ ಪೂಜೆಯ ಜವಾಬ್ದಾರಿ ನೀಡುತ್ತೇವೆ. ಹೀಗಾದರೆ ಪರಿಣಾಮ ಹೇಗೆ ಸಿಗುತ್ತದೆ. ಪರೀಕ್ಷೆ ಪಾಸಾಗಲು ಸ್ವಯಂ ಓದಲೇಬೇಕು.
ಪರಮಾತ್ಮ ನಮ್ಮ ಪ್ರಾರ್ಥನೆ ಕೇಳುತ್ತಿಲ್ಲ ಏಕೆ ?
ಒಂದು ವೇಳೆ ದೇಶದ ಪ್ರಧಾನಮಂತ್ರಿಯೊಂದಿಗೆ ನಮ್ಮ ಸ್ನೇಹವಾದರೆ ನಮ್ಮ ಯಾವುದೇ ಕೆಲಸಗಳು ನಿಲ್ಲುವುದಿಲ್ಲ. ಪರಮಾತ್ಮನೊಂದಿಗೆ ನಮ್ಮ ಸಂಪರ್ಕ ಆದರೆ ನಮ್ಮ ಕಾರ್ಯ ನಿಲ್ಲುತ್ತದೆಯೇ ಯೋಚಿಸಿ. ಪರಮಾತ್ಮನೊಂದಿಗೆ ಈ ಸಂಪರ್ಕ ಸಾಧಿಸಲಿಕ್ಕಾಗಿಯೇ ಎಲ್ಲರೂ ತಮ್ಮ ತಮ್ಮ ಪ್ರಾರ್ಥನಾ ಕೇಂದ್ರಗಳಿಗೆ ಹೋಗುತ್ತೇವೆ. ಒಂದು ಬಾರಿ ಪರಮಾತ್ಮ ನಮ್ಮ ಪ್ರಾರ್ಥನೆ ಕೇಳುತ್ತಿದ್ದಾನೆ ಅನ್ನಿಸುತ್ತದೆ ಇನ್ನೊಂದು ಸಲ ಪ್ರಾರ್ಥನೆ ಕೇಳುತ್ತಿಲ್ಲವಲ್ಲ ಎಂದು ಅನಿಸುತ್ತದೆ. ನಮ್ಮ ಪ್ರಾರ್ಥನೆಯನ್ನು ಪ್ರತಿ ಬಾರಿಯೂ ಪರಮಾತ್ಮ ಏಕೆ ಕೇಳುವುದಿಲ್ಲ ಎಂಬ ಪ್ರಶ್ನೆಯು ಮನಸ್ಸಿನಲ್ಲಿ ಹುಟ್ಟುತ್ತದೆ. ಆದರೆ ಕೆಲವೊಂದು ಸಲ ನಾವು ಪ್ರಾರ್ಥಿಸದೇ ಇದ್ದರೂ ಕೆಲಸಗಳು ಪೂರ್ಣಗೊಳ್ಳುತ್ತವೆ. ಕೆಲವು ಬಾರಿ ಅನ್ನಿಸುತ್ತದೆ ಪರಮಾತ್ಮ ನಮ್ಮ ಕಷ್ಟದಲ್ಲಿಯೂ ನಮ್ಮ ಪ್ರಾರ್ಥನೆ ಆಲಿಸುತ್ತಿಲ್ಲ. ಇನ್ನೂ ಕೆಲವು ಜನ ಹೇಳುತ್ತಿರುತ್ತಾರೆ ನಾವು ಎಷ್ಟೊಂದು ಪೂಜೆ, ಪ್ರಾರ್ಥನೆ, ಹೋಮ ಹವನ ಮಾಡುತ್ತೇವೆ ಆದರೂ ಪರಮಾತ್ಮ ಎಲ್ಲಿದ್ದಾನೆ ತಿಳಿಯುತ್ತಿಲ್ಲ. ನಮ್ಮ ದುಃಖ ಕೇಳುತ್ತಿಲ್ಲ ಎನ್ನುತ್ತಿರುತ್ತಾರೆ.
ನಾವು ಈಗ ಈ ವಿಷಯವನ್ನು ಒಂದು ಉದಾಹರಣೆಯ ಮೂಲಕ ನೋಡೋಣ. ಆಕಾಶದಲ್ಲಿ ಮಿಂಚು ಬಂದಾಗ ಲಕ್ಷಾಂತರ ವೋಲ್ಟ್ ವಿದ್ಯುತ್ ಇರುತ್ತದೆ. ಆದರೆ ನಾವು ಇದರಿಂದ ನಮ್ಮ ಮನೆಯ ಬಲ್ಬನ್ನು ಉರಿಸಲಾಗುವುದಿಲ್ಲ. ಈ ಮಿಂಚಿನ ವಿದ್ಯುತ್ ಪ್ರಕಾಶಮಾನವಾಗಿರುತ್ತದೆ ಆದರೆ ಈ ಬೆಳಕು ನಮ್ಮ ಇಚ್ಛೆಯಿಂದ ಆಗುವುದಿಲ್ಲ. ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿಯು ಲಕ್ಷಾಂತರ ವೋಲ್ಟ್ ವಿದ್ಯುತ್ ಉತ್ಪಾದನೆಯಾಗುತ್ತದೆ. ಈ ವಿದ್ಯುತ್ ನಿಂದ ನಮ್ಮ ಮನೆ ಸಂಪೂರ್ಣ ಪ್ರಕಾಶಮಯವಾಗುತ್ತದೆ. ಆಕಾಶದ ಮಿಂಚಿನ ಬೆಳಕಿನೊಂದಿಗೆ ನಮ್ಮ ಯಾವ ಸಂಪರ್ಕ ಇರುವುದಿಲ್ಲ. ಮಿಂಚು ಸಿಡಿಲಿನ ಮೂಲಕ ಬೆಳಕು ಸಿಗುತ್ತದೆ ಆದರೆ ನಮಗೆ ಬೇಕಾದ ಸ್ಥಳದಲ್ಲಿ ಸಿಗುವುದಿಲ್ಲ. ಆದರೆ ವಿದ್ಯುತ್ ಉತ್ಪಾದನಾ ಕೇಂದ್ರದಿಂದ ತಂತಿ ಮತ್ತು ಟ್ರಾನ್ಸ್ ಫಾರ್ಮರ್ ಮೂಲಕ ನಿಯಂತ್ರಣ ಗೊಂಡು ಬಂದಂತಹ ವಿದ್ಯುತ್ ಇಡೀ ಮನೆಯನ್ನು ಪ್ರಕಾಶಗೊಳಿಸುತ್ತದೆ. ನಾವು ಯಾರನ್ನು ಪೂಜಿಸುತ್ತೇವೆಯೋ ಎಲ್ಲವೂ ಆಕಾಶದ ವಿದ್ಯುತ್ ರೀತಿ. ಆ ಶಕ್ತಿ ಅದರ ಇಚ್ಛೆಗೆ ಅನುಗುಣವಾಗಿ ನಮಗೆ ಕೃಪೆ ತೋರುತ್ತದೆಯೇ ಹೊರತು ನಮ್ಮ ಇಚ್ಛೆಗೆ ತಕ್ಕಂತೆ ಕೃಪೆ ತೋರುವುದಿಲ್ಲ. ನಮಗೂ ಪರಮಾತ್ಮನೊಂದಿಗೆ ಯಾವುದಾದರೂ ಸಂಪರ್ಕ ಮಾಧ್ಯಮ ಬೇಕಾಗಿದೆ. ಈ ಪರಮಾತ್ಮನ ಶಕ್ತಿಯೊಂದಿಗೆ ಸಂಪರ್ಕ ಸಾಧಿಸುವ ಮಾರ್ಗವನ್ನು ನಮ್ಮ ಜನರು ತಿಳಿದಿಲ್ಲ. ಇದರೊಂದಿಗೆ ಸಂಪರ್ಕ ಸಾಧಿಸಲು ಒಂದು ತಂತಿಯ ಅವಶ್ಯಕತೆ ಇದೆ. ಧ್ಯಾನ ವೇ ಆ ಸಂಪರ್ಕ ಸಾಧಿಸುವ ತಂತಿ. ಪ್ರಪಂಚದ ಎಲ್ಲಾ ಧರ್ಮವು ಧ್ಯಾನದ ಮಹತ್ವದ ಬಗ್ಗೆ ಹೇಳುತ್ತವೆ.
ಪರಮಾತ್ಮನ ಇರುವಿಕೆಯನ್ನು ಹೇಗೆ ಅನುಭವಿಸುವುದು?
ನಾವು ವಿಚಾರ ಮಾಡಿದಾಗ ತಿಳಿಯುತ್ತದೆ ಏನೆಂದರೆ ಸತ್ಯಯುಗದಲ್ಲಿ ದೇವತೆಗಳು, ತೇತ್ರಾಯುಗದಲ್ಲಿ ರಾಮ ಸೀತೆ, ದ್ವಾಪರಯುಗದಲ್ಲಿ ಕೃಷ್ಣ ರಾಧೆ ಮತ್ತು ವರ್ತಮಾನದಲ್ಲಿ ಬುದ್ಧ, ಮಹಾವೀರ, ನಾನಾಕ್, ಮಹಮ್ಮದ್, ಜೀಸಸ್, ಕಬೀರರು, ಮೀರಾ, ವಿವೇಕಾನಂದರು ಎಲ್ಲರೂ ನಮ್ಮ ಹಾಗೆಯೇ ಶಾರೀರಿಕ ದೇಹಲಕ್ಷಣವನ್ನು ಹೊಂದಿದ್ದರು. ಆದರೆ ಅವರಲ್ಲಿ ಯಾವ ವಿಶೇಷ ಅಂಶ ಅವರನ್ನು ಪೂಜ್ಯನೀಯವಾಗಿ ಮಾಡಿದೆ. ಅವರಲ್ಲಿ ಯಾವುದೋ ಶಕ್ತಿ ಚೇತನಗೊಂಡಿತ್ತು. ನಮ್ಮಲ್ಲಿ ಅ ಶಕ್ತಿ ಇನ್ನೂ ಚೇತನಗೊಂಡಿಲ್ಲ. ಆ ಶಕ್ತಿಯ ಹೆಸರೇ ಕುಂಡಲಿನಿ ಶಕ್ತಿ. ಆ ಶಕ್ತಿ ಅವರೆಲ್ಲರಲ್ಲೂ ಜಾಗೃತಗೊಂಡಿದ್ದ ಪರಿಣಾಮ ಅವರು ವಿಶಿಷ್ಟ ವ್ಯಕ್ತಿಗಳಾದರು. ನಮ್ಮೆಲ್ಲರಲ್ಲೂ ಕುಂಡಲಿನಿ ಶಕ್ತಿ ಇದೆ, ಆದರೆ ಅದು ನಮ್ಮಲ್ಲಿ ನಿದ್ರಾವಸ್ಥೆಯಲ್ಲಿದೆ. ಅ ಕುಂಡಲಿನಿ ಶಕ್ತಿ ನಮ್ಮಲ್ಲಿ ಜಾಗೃತಗೊಂಡರೆ ನಮಗೆ ಅರಿವಾಗುವುದೇನೆಂದರೆ ಹೊರಗೆ ಹುಡುಕುತ್ತಿರುವ ಪರಮಾತ್ಮ ನಮ್ಮೊಳಗೆ ಇದ್ದಾನೆ.
ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ಒಂದು ಕಡೆ ಆಲೂಗಡ್ಡೆ, ಈರುಳ್ಳಿ, ತರಕಾರಿ, ರೊಟ್ಟಿ , ಅನ್ನ ಇತ್ಯಾದಿ ಆಹಾರ ವಸ್ತುಗಳನ್ನು ಹಾಕಿದಾಗ ಇನ್ನೊಂದು ಕಡೆಯಿಂದ ರಕ್ತ ಉತ್ಪಾದನೆಯಾಗುವ ಯಾವುದೆ ಯಂತ್ರವನ್ನು ಕಂಡುಹಿಡಿದಿಲ್ಲ. ಆದರೆ ನಮ್ಮ ಶರೀರದಲ್ಲಿ ಆ ಯಂತ್ರವಿದೆ. ವಿಜ್ಞಾನವು ರಕ್ತದಲ್ಲಿರುವ ಪೊಟ್ಯಾಸಿಯಂ, ಸೋಡಿಯಂ ಇನ್ನಿತರ ಅಂಶಗಳನ್ನು ಹೇಳುತ್ತದೆ ಅದರೆ ಇದುವರೆಗೆ ರಕ್ತವನ್ನು ಉತ್ಪಾದಿಸಲು ಆಗಿಲ್ಲ. ಇದು ಆಗುವುದು ನಮ್ಮೊಳಗೆ ಇರುವ ಪರಮಾತ್ಮನ ಕಾರಣದಿಂದ. ಆ ಪರಮಾತ್ಮನೊಂದಿಗೆ ನಾವು ಸಂಪರ್ಕ ಸಾಧಿಸಬೇಕು. ಇದು ಧ್ಯಾನದ ಮೂಲಕ ಸಾಧ್ಯ . ಹೇಗೆ ಒಂದು ಹೆಣ್ಣು ಜೀವನದಲ್ಲಿ ಮಗಳು, ಪತ್ನಿ, ಸಹೋದರಿ, ಅಜ್ಜಿ, ತಾಯಿ ಹೀಗೆ ವಿವಿಧ ರೂಪದಲ್ಲಿರುತ್ತಾಳೋ ಹಾಗೆಯೇ ಪರಮಾತ್ಮನ ಶಕ್ತಿ ಒಂದೇ ಆಗಿರುತ್ತದೆ. ರಾಧಾ, ಸೀತಾ, ದುರ್ಗೆ, ಕಾಳಿ, ಪಾರ್ವತಿ, ಅಂಬಾ ಇವೆಲ್ಲವೂ ಕುಂಡಲಿನಿ ಶಕ್ತಿಯ ವಿವಿಧ ರೂಪಗಳಾಗಿವೆ. ಯೋಗಿಗಳು ಧ್ಯಾನದಲ್ಲಿ ಈ ಕುಂಡಲಿನಿ ಶಕ್ತಿಯ ವಿವಿಧ ರೂಪಗಳನ್ನು ನೋಡಿ ನಂತರ ಅವರು ಈ ಆಕಾರಕ್ಕೆ ಮೂರ್ತಿರೂಪ ನೀಡಿದರು. ನಾವು ಆ ಶಕ್ತಿಯೊಂದಿಗೆ ಸಂಪರ್ಕ ಸಾಧಿಸಲು ಸಾಧನೆ ಮಾಡುವ ಬದಲು ಅದರ ಚಿತ್ರಗಳನ್ನು ಪೂಜೆ ಮಾಡಲು ಪ್ರಾರಂಭಿಸಿದೆವು. ನಾವೆಲ್ಲರೂ ಪರಮಾತ್ಮನ ಶಕ್ತಿಯೊಂದಿಗೆ ಸಂಪರ್ಕ ಸಾಧಿಸಲು ಪ್ರಾರ್ಥನೆ ಮಾಡುತ್ತಿದ್ದೇವೆ. ನಾವು ಆ ಶಕ್ತಿಯನ್ನು ರಾಮ, ಕೃಷ್ಣ, ವಿಷ್ಣು, ಅಲ್ಲಾ, ಜೀಸಸ್, ಬುದ್ಧ, ಮಹಾವೀರ ಹೀಗೆ ಯಾವುದೇ ಹೆಸರಿನಿಂದ ಕರೆಯುತ್ತಾ ಯಾವ ಮಾಧ್ಯಮದ ಮೂಲಕವಾದರೂ ಮುಂದುವರೆಯಬಹುದು. ಹೆಸರು ಮಾತ್ರ ಬೇರೆ ಬೇರೆಯಾಗಿರಯತ್ತದೆ ಆದರೆ ಶಕ್ತಿ ಮಾತ್ರ ಒಂದೇಯಾಗಿರುತ್ತದೆ.
ಯಾರ ಕುಂಡಲಿನಿ ಶಕ್ತಿ ಜಾಗೃತವಾಗಿತ್ತೋ ಅವರ ಆಂತರಿಕ ಜ್ಯೋತಿ ಪ್ರಕಾಶಮಾನವಾಗಿತ್ತು. ನಮ್ಮ ಬಳಿ ದೀಪ, ಎಣ್ಣೆ, ಬತ್ತಿ ಎಲ್ಲವೂ ಇದೆ ಆದರೆ ದೀಪದಲ್ಲಿ ಪ್ರಕಾಶವೇ ಇಲ್ಲ. ಈ ದೀಪವನ್ನು ಹೊತ್ತಿಸಿ ಪ್ರಕಾಶ ಮಾಡಿಕೊಳ್ಳಲು ನಾವು ಪೂಜೆ, ವ್ರತ, ಪ್ರಾರ್ಥನೆ ಎಲ್ಲವೂ ಮಾಡುತ್ತೇವೆ. ದೀಪವು ನಮ್ಮೊಳಗೆ ಇರಬೇಕಾದರೆ ಹೊರಗಿನಿಂದ ಅದು ಹೇಗೆ ಪ್ರಕಾಶಿಸುತ್ತದೆ. ಈ ದೀಪವನ್ನು ನಾವು ಧ್ಯಾನ ಮತ್ತು ಮಂತ್ರಜಪದಿಂದ ಪ್ರಜ್ವಲಗೊಳಿಸಬಹುದು. ಮಂತ್ರಜಪ ಮತ್ತು ಧ್ಯಾನದಿಂದ ನಮ್ಮೊಳಗಿನ ಜ್ಯೋತಿ ಪ್ರಕಾಶಗೊಳ್ಳುತ್ತದೆ. ಈ ಪ್ರಕಾರ ಜಾಗೃತಗೊಂಡ ಕುಂಡಲಿನಿ ಶಕ್ತಿಯು ಇಲ್ಲಿಯವರೆಗೆ ನಾವು ಯಾವುದನ್ನು ಹೊರಗೆ ಹುಡುಕುತ್ತಿದ್ದೇವೋ ಆ ಪರಮಾತ್ಮನ ಶಕ್ತಿಯೊಂದಿಗೆ ನಮ್ಮನ್ನು ಪರಿಚಯ ಮಾಡಿಸುತ್ತದೆ.
ನಾವು ಪರಮಾತ್ಮನೊಂದಿಗೆ ಸಂಪರ್ಕ ಸಾಧಿಸಲು ಇರುವ ಸಹಜ ಮಾರ್ಗ ಯಾವುದು?
ನಾವು ಪ್ರಯತ್ನಪಟ್ಟರೇ ಒಂದು ಸರಳ ವಿಧಾನದ ಮೂಲಕ ಅಂದರೆ ಗುರು ಸಿಯಾಗ್ ರವರ ಸಿದ್ಧಯೋಗದ ಮೂಲಕ ನಾವು ಪರಮಾತ್ಮನೊಂದಿಗೆ ನೇರ ಸಂಪರ್ಕ ಸಾಧಿಸಬಹುದು. ಇದು ನಿಮ್ಮ ಮನೆಯಲ್ಲಿಯೇ ಕುಳಿತು ಸರಳವಾಗಿ ಮಾಡಬಹುದು. ಯಾವುದೇ ಹಣದ ಅವಶ್ಯಕತೆಯಿಲ್ಲ ,ಸಂಪೂರ್ಣ ಉಚಿತವಾಗಿದೆ. ಈ ವಿಧಾನದಲ್ಲಿ ನೀವು ಎಲ್ಲಿಯೂ ಹೋಗುವ ಅವಶ್ಯಕತೆ ಇಲ್ಲ. ಯಾವ ಪ್ರಕಾರದ ಊಟ-ಉಪಚಾರದ ಬಂಧನವಿಲ್ಲ. ಯಾವುದನ್ನೂ ಬಿಡುವ ಅವಶ್ಯಕತೆಯಿಲ್ಲ. ಈ ಧ್ಯಾನವನ್ನು ಮನೆ, ಆಫೀಸ್, ಕಛೇರಿ, ಗಾಡಿ ಎಲ್ಲಿಯಾದರೂ ಮಾಡಬಹುದು. ನೀವು ಬೇರೆ ಯಾವ ವಿಧಾನದ ಮೂಲಕ ನಿಮ್ಮೊಳಗಿನ ಅಂತರಾತ್ಮದ ಧ್ವನಿಯನ್ನು ಗ್ರಹಿಸುವಲ್ಲಿ ಸಫಲತೆ ಹೊಂದಲು ಸಾಧ್ಯವಾಗದಿದ್ದರೆ ಗುರು ಸಿಯಾಗ್ ಸಿದ್ಧಯೋಗ (GSSY) ಬಗ್ಗೆ ತಿಳಿಯಲು 9468623528 ನಂಬರಿಗೆ ಕರೆ ಮಾಡಿ ಇಲ್ಲವೇ 7976251916 ನಂಬರ್ ಗೆ ವ್ಯಾಟ್ಸಾಪ್ ಮಾಡಿ. ಇದು ಸಂಪೂರ್ಣ ಉಚಿತವಾಗಿದೆ. ಈ ವಿಧಾನದಲ್ಲಿ ಧ್ಯಾನ ಮತ್ತು ಮಂತ್ರಜಪದ ತಂತಿಯ ಮೂಲಕ ನಾವು ಪರಮಾತ್ಮನೊಂದಿಗೆ ಸಂಪರ್ಕ ಸಾಧಿಸಬಹುದು. ನಾವು ನಮ್ಮ ಇಚ್ಛೆಗಳನ್ನು ಪೂರ್ಣಗೊಳಿಸಿಕೊಳ್ಳಲು ನಾವು ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಅನೇಕ ತಪ್ಪು ಕೆಲಸ ಮಾಡಬಹುದು. ಅದರೆ ಈ ವಿಧಾನದ ಮೂಲಕ ನಿಮ್ಮ ಇಚ್ಛೆಗಳು ಸಹಜ ರೂಪದಲ್ಲಿ ಪೂರ್ಣಗೊಳ್ಳಲು ಪ್ರಾರಂಭವಾಗುತ್ತವೆ.
ನಾವು ಬದುಕಿರುವಾಗಲೇ ಮೋಕ್ಷ ಅಥವಾ ಸ್ವರ್ಗದ ಸುಖ ಬಯಸುವಿರಾದರೆ ಈ ಧ್ಯಾನ ಮತ್ತು ಮಂತ್ರಜಪ ಅದಕ್ಕೆ ಕೀಲಿಕೈ ಆಗಿದೆ. ಒಂದು ಬಾರಿ ಧ್ಯಾನ ಮಾಡಿ ನೋಡಿ. ಮಂತ್ರಜಪ ಮತ್ತು ಧ್ಯಾನವು ನಿಮ್ಮ ಮತ್ತು ಪರಮಾತ್ಮನ ಮಧ್ಯೆ ಒಂದು ತಂತಿಯಾಗಿ ನಿಮ್ಮ ಪ್ರಾರ್ಥನೆಯನ್ನು ಭಗವಂತನಿಗೆ ತಲುಪಿಸುತ್ತದೆ. ಇದರಿಂದ ನಿಮ್ಮ ಎಲ್ಲಾ ನಿಂತು ಹೋದ ಕಾರ್ಯಗಳು ನಡೆಯತೊಡಗುತ್ತವೆ.
ಪ್ರಪಂಚದಾದ್ಯಂತ ಜನರು ಭಗವಂತನನ್ನು ಪಡೆಯಲು ಹಲವು ರೀತಿಯ ಆರಾಧನೆಯನ್ನು ಮಾಡುತ್ತಾರೆ. ಯಾರು ತಮ್ಮ ಗುರಿಯನ್ನು ತಲುಪುತ್ತಾರೋ ಅವರು ನಿಲ್ಲುತ್ತಾರೆ. ಯಾರಿಗೆ ಸರಿಯಾದ ಮಾರ್ಗ ಸಿಗುವುದಿಲ್ಲವೋ ಅವರು ಹುಡುಕುತ್ತಲೇ ಇರುತ್ತಾರೆ. ನಿಮಗೆ ಒಂದು ಉದಾಹರಣೆ ಮೂಲಕ ಹೇಳುವುದಾದರೆ ನಿಮ್ಮ ಬಳಿ ಒಂದು ಬೀಗ ಹಾಕಿದ ಪೆಟ್ಟಿಗೆ ಇದೆ ಎಂದುಕೊಳ್ಳಿ ಅದಕ್ಕೆ ನಿಮಗೆ ಹಲವಾರು ಬೀಗದ ಕೀ ಇರುವ ಗೊಂಚಲನ್ನು ನೀಡಲಾಗುತ್ತದೆ. ನೀವು ಒಂದೊಂದೆ ಕೀ ಉಪಯೋಗ ಮಾಡುತ್ತಾ ಹೋದಂತೆ ಯಾವುದೋ ಒಂದು ಕೀ ಪೆಟ್ಟಿಗೆಯ ಬೀಗವನ್ನು ತೆರೆಯುತ್ತದೆ. ಸರಿಯಾದ ಕೀ ಹುಡುಕುವಲ್ಲಿ ಹಿಡಿಯುವ ಸಮಯದ ನಿಯಂತ್ರಣ ನಿಮ್ಮ ಬಳಿಯಿಲ್ಲ. ಅದರೆ ಯಾವುದೋ ಒಂದು ಸರಿಯಾದ ಕೀ ಆ ಗೊಂಚಲಲ್ಲಿ ಇದೆ ಅದು ನಿಮ್ಮ ಪೆಟ್ಟಿಗೆಯನ್ನು ತೆರೆಯುತ್ತದೆ. ಆದರೆ ಆ ಕೀ ಪಡೆಯುವುದು ಸುಲಭವಲ್ಲ. ಈ ಪ್ರಕಾರ ಭಗವಂತನನ್ನು ಪಡೆಯಲು ವಿವಿಧ ಮಂತ್ರ ಮತ್ತು ವಿಧಿ ವಿಧಾನಗಳಿವೆ. ನಮ್ಮನ್ನು ಯಾವ ಮಂತ್ರ ಅಥವಾ ವಿಧಾನ ಉದ್ಧಾರ ಮಾಡುತ್ತದೆ ಎಂದು ಹುಡುಕಿ ಹುಡುಕಿ ಹಲವು ಜನ್ಮಗಳೇ ಕಳೆದಿರುತ್ತದೆ.
ಇಲ್ಲಿ ಹೇಳುವ ಸಂಜೀವಿನಿ ಮಂತ್ರ ಅದು ಭಗವಂತನನ್ನು ಪಡೆಯುವ ಮಾಸ್ಟರ್ ಕೀ ಆಗಿದೆ. ಈ ಸಂಜೀವಿನಿ ಮಂತ್ರ ನಿಮ್ಮನ್ನು ಈ ಜನ್ಮದಲ್ಲೇ , ಯಾವುದನ್ನೂ ಬಿಡದೇ, ನಿಮ್ಮಿಂದ ಏನನ್ನೂ ಪಡೆಯದೇ,ಮನೆಯಲ್ಲಿಯೇ ಇದ್ದುಕೊಂಡೆ ನಿಮ್ಮನ್ನು ಭಗವಂತನೊಂದಿಗೆ ಸಂಪರ್ಕವೇರ್ಪಡಿಸುತ್ತದೆ. ಪ್ರಪಂಚದಾದ್ಯಂತ ಜನರು ಪರಮಾತ್ಮನ ಹುಡುಕಾಟದಲ್ಲಿದ್ದವರು ಈ ವಿಧಾನದ ಮೂಲಕ ಪ್ರಯತ್ನ ಪಟ್ಟು ನೋಡಬಹುದು.

