ಆಧ್ಯಾತ್ಮಿಕ ಉನ್ನತಿ ಮತ್ತು ಸಮಗ್ರ ಆರೋಗ್ಯಕ್ಕಾಗಿ ಉಚಿತ ಧ್ಯಾನ.
- ಇದು ವಿದ್ಯಾರ್ಥಿಗಳ ವ್ಯಕ್ತಿತ್ವ, ಆತ್ಮವಿಶ್ವಾಸ, ಏಕಾಗ್ರತೆ ಮತ್ತು ಸ್ಮರಣಶಕ್ತಿಯನ್ನು ಬೆಳೆಸುವಲ್ಲಿ ಬಹಳ ಪ್ರಯೋಜನಕಾರಿಯಾಗಿದೆ.
- ಚಿಕಿತ್ಸೆಯನ್ನು ಮುಂದುವರಿಸುವ ಮೂಲಕ ದೈಹಿಕ ಕಾಯಿಲೆ ಮತ್ತು ವ್ಯಸನದಿಂದ ಮುಕ್ತಿ ಸಾಧ್ಯ.
- ಆತಂಕ, ಖಿನ್ನತೆ, ಒತ್ತಡ, ಭಯ, ಕಿರಿಕಿರಿ ಇತ್ಯಾದಿಗಳಿಂದ ಪರಿಹಾರ ಸಾಧ್ಯ.
- ಕೌಟುಂಬಿಕ, ವ್ಯವಹಾರ, ಶಿಕ್ಷಣ ಮತ್ತು ಆರ್ಥಿಕ ಸಮಸ್ಯೆಗಳಿಂದ ಪರಿಹಾರ.
- ದೈನಂದಿನ ಜೀವನದ ಜಂಜಾಟದಿಂದ ಉಂಟಾಗುವ ದೈಹಿಕ ಮತ್ತು ಮಾನಸಿಕ ಆಯಾಸವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ
- ಮಂತ್ರವನ್ನು ನಿರಂತರ ಜಪಿಸುವುದರಿಂದ ವ್ಯಕ್ತಿಯ ತಾಮಸಿಕ ಗುಣವು ಸಾತ್ವಿಕ ಗುಣವಾಗಿ ಸಹಜವಾಗಿ ಪರಿವರ್ತನೆಯಾಗುತ್ತದೆ.
- ಸಂಸಾರಿಕ ಜೀವನವನ್ನು ನಡೆಸುವುದರ ಜೊತೆಗೆ ಮಾನವನ ದಿವ್ಯ ರೂಪಾಂತರಣ ಮತ್ತು ಮೋಕ್ಷದ ಪ್ರಾಪ್ತಿ.
ಶಾರೀರಿಕ ರೋಗಗಳಿಂದ ಮುಕ್ತಿ
ಆಧುನಿಕ ಚಿಕಿತ್ಸಾ ವಿಧಾನದಂತೆಎರಡು ರೀತಿಯ ರೋಗಗಳಿವೆ. ಅವು ಶಾರೀರಿಕ ರೋಗಗಳು ಮತ್ತು ಮಾನಸಿಕ ರೋಗಗಳು. ವೈದ್ಯರು ಬಾಹ್ಯವಾಗಿ ಅಥವಾ ಆಂತರಿಕವಾಗಿ ಆ ರೋಗಗಳಿಗೆ ಚಿಕಿತ್ಸೆ ನೀಡುತ್ತಾರೆ. ಪ್ರಾಚೀನ ಕಾಲದಲ್ಲಿ ಯೋಗಿಗಳು ಧ್ಯಾನದ ಅನುಭವದ ಆಧಾರದಲ್ಲಿ ಹೇಳಿರುವಂತೆ ” ಮಾನವನಿಗೆ ಖಾಯಿಲೆಗಳು ಅವನ ವರ್ತಮಾನ ಮತ್ತು ಭೂತಕಾಲದ ಕರ್ಮಗಳ ಫಲವಾಗಿ ಬರುತ್ತದೆ.” ಮಾನವನ ಪ್ರತಿ ಕರ್ಮಕ್ಕೂ ಅದರದೇ ಆದ ಫಲ ಇರುತ್ತದೆ. ಅದರ ಫಲ ಈ ಜನ್ಮ ಅಥವಾ ಮುಂದಿನ ಜನ್ಮದಲ್ಲಿ ಅನುಭವಿಸಬೇಕಾಗುವುದು. ಮಾನವನು ಜೀವನ- ಮರಣಗಳ ಚಕ್ರದಲ್ಲಿ ಬಂಧಿಯಾಗಿದ್ದಾನೆ. ಆತನಿಗೆ ಕರ್ಮದ ಆಧಾರದ ಮೇಲೆ ಜೀವನದ ಅನುಭವವಾಗುತ್ತದೆ. ಇದು ಪ್ರಕೃತಿಯ ನಿಯಮ.ವ್ಯಕ್ತಿ ಜನನ- ಮರಣಗಳ ಚಕ್ರದಲ್ಲಿ ಬಂಧಿಯಾಗಿದ್ದಾನೆ. ಗುರು ಸಿಯಾಗ್ ಸಿದ್ದಯೋಗದ ಆರಾಧನೆಯಿಂದ ಸಾಧಕ ಕರ್ಮ ಬಂಧನದಿಂದ ಮುಕ್ತನಾಗುತ್ತಾನೆ.ಸಹಜ ರೂಪದಲ್ಲಿ ಕಷ್ಟ ಪರಿಹಾರವಾಗುತ್ತಾ ಹೋಗುತ್ತದೆ. ಮುಂದೆ ಕೆಟ್ಟ ಕರ್ಮಗಳು ಮಾಡಲಾಗುವುದಿಲ್ಲ. ಆತ್ಮಸಾಕ್ಷಾತ್ಕಾರವಾಗುವುದರಿಂದ ಸಾಧಕ ಕರ್ಮ ಫಲದ ಇಚ್ಛೆಯಿಂದ ಸಹಜವಾಗಿ ಮುಕ್ತನಾಗುತ್ತಾನೆ. ಪತಂಜಲಿ ಯೋಗಸೂತ್ರದಲ್ಲಿ ಶಾರೀರಿಕ , ಮಾನಸಿಕ ಮತ್ತು ಆಧ್ಯಾತ್ಮಿಕ ರೋಗಗಳ ಬಗ್ಗೆ ಹೇಳಿದ್ದಾರೆ. ಆಧ್ಯಾತ್ಮಿಕ ಸಮಸ್ಯೆಗಳಿಗೆ ಆಧ್ಯಾತ್ಮ ಚಿಕಿತ್ಸೆಯ ಅವಶ್ಯಕತೆಯಿದೆ. ನಿಯಮಿತ ಜಪ ಮತ್ತು ಧ್ಯಾನದಿಂದ ಆಧ್ಯಾತ್ಮಿಕ ರೋಗಗಳು ಗುಣವಾಗುವವು.
ಚಿಂತೆಯಿಂದ ಮುಕ್ತಿ
ವೈದ್ಯಕೀಯ ವಿಜ್ಞಾನದಲ್ಲಿ ಚಿಂತೆಯಿಂದ ಮುಕ್ತಿ ಪಡೆಯಲು ನಿದ್ರೆ ಮತ್ತು ನೋವುನಿವಾರಕ ಮಾತ್ರೆಗಳನ್ನು ನೀಡುವರು. ಸಿದ್ಧಯೋಗವು ನಶೆ ನೀಡುವುದು, ಅದು ನಾಮದ ನಶೆಯಾಗಿದೆ. ಮಂತ್ರದ ನಿರಂತರ ಜಪದಿಂದ ನಾಮದ ನಶೆ ಉಂಟಾಗುವುದು. ಇದರಿಂದ ಮಾನಸಿಕ ಚಿಂತೆ, ಕೋಪ , ಅನಿದ್ರೆ, ಭಯ, ಮುಂತಾದವುಗಳಿಂದ ಮುಕ್ತಿ ಸಿಗುತ್ತದೆ. ಮಾನಸಿಕ ಚಿಂತೆಗೆ ಕಾರಣ ನೌಕರಿ, ಮದುವೆ, ಪರಿವಾರ, ಆರ್ಥಿಕ ಸಮಸ್ಯೆ, ಕಛೇರಿ, ಮಾಟ- ಮಂತ್ರ ಯಾವುದಾದರೂ ಆಗಿರಬಹುದು. ನಿಯಮಿತ ಧ್ಯಾನ ಮತ್ತು ಜಪ ಸ್ವಲ್ಪ ದಿನದಲ್ಲೇ ನಿಮಗೆ ಸಹಾಯ ಮಾಡುವುದು. ಧ್ಯಾನದಲ್ಲಿ ನಿಮಗೆ ಪರಿಹಾರ ಗೋಚರಿಸುವುದು.ಇದರಿಂದ ನಿಮ್ಮ ಚಿಂತೆ ಮತ್ತು ಕೋಪ ಕಡಿಮೆಯಾಗುತ್ತಾ ಹೋಗುತ್ತದೆ. ಸಮಸ್ಯೆಯ ಪರಿಹಾರವು ಧ್ಯಾನದಲ್ಲಿ ಯಾವುದೇ ವ್ಯಕ್ತಿ ರೂಪದಲ್ಲಿ, ಯಾವುದೇ ಪುಸ್ತಕದ ರೂಪದಲ್ಲಿ , ಯಾವುದೇ ದೂರವಾಣಿಯ ಕರೆಯ ರೂಪದಲ್ಲಿ ಯಾವ ಮಾಧ್ಯಮದ ಮೂಲಕವಾದರೂ ದೊರಕುವುದು. ಗುರು ಸಿಯಾಗ್ ಸಿದ್ದಯೋಗ ಮನೋವೈಜ್ಞಾನಿಕ ಮತ್ತು ಭಾವನಾತ್ಮಕ ಅಸುಂತಲನವನ್ನು ದೂರಮಾಡಿ ಶರೀರವನ್ನು ಪೂರ್ಣ ಸ್ವಸ್ಥ ಮಾಡುತ್ತದೆ.
ನಶೆಯಿಂದ ಮುಕ್ತಿ
ಪ್ರತಿ ಮಾನವನಲ್ಲಿ 3 ರೀತಿಯ ವೃತ್ತಿಗಳಿವೆ. ಸಾತ್ವಿಕ ( ಶುದ್ಧ, ಶಾಂತ, ಪ್ರಶಾಂತ), ರಾಜಸಿಕ( ಆವೇಶ ಪೂರ್ಣ, ತೀವ್ರ, ಕ್ರೋಧಶೀಲ), ತಾಮಸಿಕ ಗುಣ( ನಿಷ್ಕ್ರಿಯ, ಆಲಸ್ಯ, ನಕರಾತ್ಮಕ, ಅಜ್ಞಾನ) . ಈ ವೃತ್ತಿಗಳು ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ದರಿಸುತ್ತವೆ. ವೃತ್ತಿಯ ಆಧಾರದಿಂದಲೇ ವ್ಯಕ್ತಿಯ ಜೀವನ ಮತ್ತು ಅದರ ಕರ್ಮಗಳು ರೂಪಿತವಾಗುತ್ತವೆ. ವ್ಯಕ್ತಿಯ ಊಟ ಉಪಚಾರ ವೃತ್ತಿಯ ಆಧಾರದಿಂದಾಗುತ್ತದೆ. ತಾಮಸಿಕ ವೃತ್ತಿಯ ವ್ಯಕ್ತಿಯಾದರೆ ನಶೆಯ ದಾಸನಾಗುತ್ತಾನೆ. ಧ್ಯಾನ ಮತ್ತು ನಾಮಜಪದಿಂದ ಮುನುಷ್ಯನ ವೃತ್ತಿ ಪರಿವರ್ತನೆಯಾಗುತ್ತದೆ. ಮನುಷ್ಯನಿಗೆ ನಿರಂತರ ನಾಮಜಪದಿಂದ ನಾಮದ ನಶೆ ಹತ್ತುವುದು. ಬೇರೆ ವಸ್ತುಗಳ ನಶೆಯು ದೂರವಾಗುತ್ತಾ ಹೋಗುತ್ತದೆ. ಇದರಿಂದ ನಶೆಯು ತಾನೆ ತಾನಾಗಿಯೆ ಸ್ವತಃ ದೂರವಾಗುತ್ತಾ ಹೋಗುತ್ತದೆ. ನಶೆಯು ನೀವು ಕೇಳುವುದಿಲ್ಲ.
ನಿಮ್ಮೊಳಗಿನ ತಾಮಸಿಕ ವೃತ್ತಿ ಕೇಳುವುದು. ಧ್ಯಾನದಲ್ಲಿ ತಾಮಸಿಕ ವೃತ್ತಿ ಸಾತ್ವಿಕ ವೃತ್ತಿಯಾಗಿ ಪರಿವರ್ತನೆಯಾಗುತ್ತದೆ.ಶರೀರದ ಅನುಪಯುಕ್ತ ಹಾನಿಕಾರಕ ವಸ್ತುಗಳು ತಾನೆ ತಾನಾಗಿ ದೂರವಾಗುತ್ತವೆ. ಈ ಸಂಬಂಧವಾಗಿ ಸ್ವಾಮಿ ವಿವೇಕಾನಂದರು ಅಮೆರಿಕಾದಲ್ಲಿ ಹೇಳಿದ್ದರು ” ತಾಮಸಿಕ ವಸ್ತುಗಳನ್ನು ನೀವು ಬಿಡಬೇಡಿ. ಅವೇ ನಿಮ್ಮ ನ್ನು ಬಿಟ್ಟು ಹೋಗುತ್ತವೆ. ಎಲ್ಲಾ ಪ್ರಕಾರದ ನಶೆಗಳಾದ ಮದ್ಯಪಾನ, ಅಫೀಮು, ಸಿಗರೇಟ್, ಗುಟ್ಕಾ ಮುಂತಾದವುಗಳು ಯಾವುದೆ ಪರಿಶ್ರಮವಿಲ್ಲದೆ ದೂರವಾಗುತ್ತವೆ. ಯಾವುದೇ ತಾಮಸಿಕ ಆಹಾರದ ಇಚ್ಚೆ ತಾನೆ ತಾನಾಗಿ ದೂರವಾಗುತ್ತದೆ. ಶರೀರದ ತೂಕ ಸಂತುಲತೆಯನ್ನು ಕಾಪಾಡುತ್ತದೆ. ಊಟ- ಉಪಚಾರ ನಿಮ್ಮ ನಿಯಂತ್ರಣಕ್ಕೆ ಬರುತ್ತದೆ. ಯಾವ ವಸ್ತುವನ್ನು ನೀವು ಬಿಡಬೇಕು ಎಂದೆನಿಸಿದರೆ ಧ್ಯಾನ ಮತ್ತು ಜಪ ಮಾಡಿ ಸ್ವತಃ ತಾನಾಗಿಯೇ ಬಿಡುತ್ತದೆ. ಇಂದು ವಿಶ್ವದಲ್ಲಿ ಮಾನಸಿಕ ಚಿಂತೆಯು ವ್ಯಾಪಕವಾಗಿದೆ.
ವಿಶ್ವದಾದ್ಯಂತ ಮನೋರೋಗಿಗಳ ಸಂಖ್ಯೆ ಹೆಚ್ಚಿದೆ. ಅದರಲ್ಲೂ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಆಧಿಕ. ಭೌತಿಕ ವಿಜ್ಞಾನದಲ್ಲಿ ಮಾನಸಿಕ ಚಿಂತೆಯನ್ನು ಶಾಂತಗೊಳಿಸುವ ಯಾವ ವಿಧಾನಗಳು ಇಲ್ಲ. ಭೌತಿಕ ವಿಜ್ಞಾನಿಗಳು ಔಷಧಿಯ ನಶೆಯಿಂದ ಚಿಂತೆಯನ್ನು ದೂರಗೊಳಿಸಲು ಅಸಫಲ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ನಶೆ ಇಳಿಯುತ್ತಿದ್ದಂತೆ ಮತ್ತೆ ಅದೇ ರೀತಿಯ ಮಾನಸಿಕ ಸ್ಥಿತಿ ಇರುತ್ತದೆ. ಬೇರೊಂದು ರೋಗಗಳು ಬರುತ್ತವೆ. ಗುರು ಸಿಯಾಗ್ ಸಿದ್ದಯೋಗ ಮಾನಸಿಕ ಅಶಾಂತತೆ ಮತ್ತು ಚಿಂತೆಯನ್ನು ದೂರಮಾಡುವ ಕ್ರಿಯಾತ್ಮಕ ವಿಧಿಯನ್ನು ಹೇಳುತ್ತದೆ. ಭೌತಿಕ ವಿಜ್ಞಾನದಂತೆ ಭಾರತೀಯ ಯೋಗ ದರ್ಶನವು ಕೂಡ ನಶೆ ಯನ್ನು ಪೂರ್ಣ ಪರಿಹಾರ ಎಂದು ನಂಬುತ್ತದೆ. ಆದರೆ ನಶೆಯು ಭಗವಂತನ ನಾಮದ ನಶೆಯಾಗಿರಬೇಕು. ಯಾವುದೇ ಭೌತಿಕ ಪದಾರ್ಥವಲ್ಲ.
ಮಕ್ಕಳು ಯಾಕೆ ಧ್ಯಾನ ಮಾಡಬೇಕು. ಗುರು ಸಿಯಾಗ್ ಧ್ಯಾನದ ಲಾಭಗಳೇನು
ಈಗ ಸ್ವಲ್ಪ ಉಳಿದಿದೆ ಧ್ಯಾನ ಮಾಡಲು ಮನಸನ್ನು ಕೇಂದ್ರಿತಗೊಳಿಸಬೇಕು. ಮಕ್ಕಳು ಧ್ಯಾನ ಮಾಡಲಾಗುವುದಿಲ್ಲ ಎಂದು ತಿಳಿದಿದ್ದಾರೆ. ಆದರೆ ಈ ಯೋಚನೆ ತಪ್ಪು. ಮಕ್ಕಳು 15 ನಿಮಿಷ ಶಾಂತವಾಗಿ ಕುಳಿತುಕೊಳ್ಳದಿದ್ದರು 5 ನಿಮಿಷ ಧ್ಯಾನ ಮಾಡುತ್ತಾರೆ. ಆದರೆ ಮಕ್ಕಳಿಗೆ ಓದಿನ ಚಿಂತೆ, ಶಾಲೆಯ ಬಗೆಗಿನ ಚಿಂತೆ, ಶಾರೀರಿಕ ಆರೋಗ್ಯದ ಮತ್ತು ಸಾಮಾಜಿಕ ವ್ಯವಹಾರದ ಬಗ್ಗೆ ಯೋಚನೆಗಳಿರುತ್ತದೆ. ಈ ರೀತಿಯ ಚಿಂತೆಗಳು ಮಕ್ಕಳಲ್ಲಿ ನಕಾರಾತ್ಮಕ ಪ್ರಭಾವ ಬೀರುತ್ತದೆ. ಗುರು ಸಿಯಾಗ್ ಯೋಗದಲ್ಲಿ ಮಕ್ಕಳ ಚಿಂತೆಯ ಮೂಲಕ ಆಗುವಂತಹ ನಕಾರಾತ್ಮಕ ಪ್ರಭಾವದಿಂದ ಮುಕ್ತಗೊಳಿಸುವುದು. ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಯನ್ನು ಹೊರತರುತ್ತದೆ. ಗುರುಸಿಯಾಗ್ ಸಿದ್ಧಯೋಗವನ್ನು ಶಾಲೆಯಲ್ಲಿ ಮತ್ತು ಮನೆಯಲ್ಲಿ ದಿನನಿತ್ಯ ಚಟುವಟಿಕೆಗಳಲ್ಲಿ ಮಾಡಿಸಬಹುದಾಗಿದೆ.
ಗುರು ಸಿಯಾಗ್ ಯೋಗದಿಂದ ಮಕ್ಕಳಿಗೆ ಪ್ರಯೋಜನಗಳು
ಮಕ್ಕಳನ್ನು ಚಿಂತೆಯಿಂದ ಮುಕ್ತಗೊಳಿಸುವುದು.
ನಾವು ಯಾವಾಗಲು ಯೋಚಿಸುವುದೇನೆಂದರೆ ಧ್ಯಾನವೆಂದರೆ ವಿಚಾರಶೂನ್ಯರಾಗುವುದು ಎಂದು ಆದರೆ ಅದು ಆ ರೀತಿಯಲ್ಲ. ಅಶಾಂತ ಮನಸನ್ನು ಶಾಂತಗೊಳಿಸುವ ವಿಧಿಯಾಗಿದೆ. ಯಾವ ರೀತಿ ನೀರಿರುವ ಲೋಟಕ್ಕೆ ಮಣ್ಣನ್ನು ಹಾಕಿ ಅಲುಗಾಡಿಸಿದಾಗ ಪೂರ್ತಿ ಲೋಟ ಮಣ್ಣಾದಂತೆ ಕಾಣುತ್ತದೆ. ಆದರೆ ಸ್ವಲ್ಪ ಸಮಯದ ನಂತರ ನಿಧಾನವಾಗಿ ಮಣ್ಣು ಲೋಟದ ತಳಭಾಗದಲ್ಲಿ ಬರುತ್ತದೆ. ಸ್ವಲ್ಪ ಸಮಯದಲ್ಲಿ ಲೋಟದಲ್ಲಿ ಸ್ವಚ್ಛ ನೀರು ಕಾಣಿಸುತ್ತದೆ. ಆದರೆ ಮಣ್ಣು ಅಡಿಯಿರುತ್ತದೆ. ಈ ರೀತಿಯಲ್ಲಿ ಧ್ಯಾನ ಮಾಡುವಾಗ ವಿಚಾರಗಳು ಶಾಂತವಾಗುತ್ತಾ ಹೋಗುತ್ತದೆ. ಸರಿಯಾಗಿ ಯಾವಾಗ ಜಪ ಮಾಡಲು ಪ್ರಾರಂಭಿಸುವಿರೋ ಆಗ ಮನಸ್ಸು ಶಾಂತವಾಗುತ್ತಾ ಹೋಗುತ್ತದೆ. ಯಾವಾಗ ಮನಸ್ಸು ಶಾಂತವಾಗುತ್ತದೋ ಅದರ ಪ್ರಭಾವ ಶರೀರದ ಮೇಲೆ ಬೀರುತ್ತದೆ.ಆಗ ಚಿಂತೆ, ಯಾತನೆಗಳು ದೂರವಾಗುತ್ತದೆ.
ಓದಿನಲ್ಲಿ ಒಳ್ಳೆಯ ಪ್ರದರ್ಶನ ತೋರುತ್ತಾರೆ.
ಈ ರೀತಿಯ ಚಿಂತೆಗಳಿಂದ ಮುಕ್ತರಾದಾಗ ಮಕ್ಕಳಲ್ಲಿ ಓದಿನಲ್ಲಿ ಆಸಕ್ತಿ ಬೆಳೆಯುತ್ತದೆ. ಧ್ಯಾನವನ್ನು ಕೇಂದ್ರಿಕರಿಸುವರು. ಯಾರು ಸಿದ್ದಯೋಗವನ್ನು ನಿಯಮಿತವಾಗಿ ಅಭ್ಯಾಸ ಮಾಡುವರೋ ಅವರಿಗೆ ಕಠಿಣ ವಿಷಯಗಳು ಸುಲಭವಾಗುತ್ತದೆ.ಏಕಾಗ್ರತೆ ಬೆಳೆಯುತ್ತದೆ. ನೆನಪಿನ ಶಕ್ತಿ ವೃದ್ಧಿಸುತ್ತದೆ. ಮಕ್ಕಳಿಗೆಪ್ರತಿದಿನ ಶಾಲೆಯಲ್ಲಿ 15 ನಿಮಿಷಗಳ ಧ್ಯಾನ ಮಾಡಿಸಿದರೆ ಮಕ್ಕಳು ಓದಿನಲ್ಲಿ ಅಭಿವೃದ್ಧಿ ಹೊಂದುವರು.ನಕರಾತ್ಮಕ ಚಿಂತೆಯಿಂದ ಹೊರಬರುವರು.
ಮಾನಸಿಕ ಚಿಂತೆ, ಡಿಪ್ರೆಷನ್ ನಿಂದ ಮುಕ್ತಿ.
ಯಾರು ಸಿದ್ದಯೋಗವನ್ನು ನಿಯಮಿತವಾಗಿ ಅಭ್ಯಾಸ ಮಾಡುವರೋ ಅವರಿಗೆ ಕಠಿಣ ವಿಷಯಗಳು ಸುಲಭವಾಗುತ್ತದೆ.ಏಕಾಗ್ರತೆ ಬೆಳೆಯುತ್ತದೆ. ನೆನಪಿನ ಶಕ್ತಿ ವೃದ್ಧಿಸುತ್ತದೆ.
ಮಾನಸಿಕ ಚಿಂತೆ, ಡಿಪ್ರೆಷನ್ ನಿಂದ ಮುಕ್ತಿ.
ಮಕ್ಕಳಿಗೆಪ್ರತಿದಿನ ಶಾಲೆಯಲ್ಲಿ 15 ನಿಮಿಷಗಳ ಧ್ಯಾನ ಮಾಡಿಸಿದರೆ ಮಕ್ಕಳು ಓದಿನಲ್ಲಿ ಅಭಿವೃದ್ಧಿ ಹೊಂದುವರು.ನಕರಾತ್ಮಕ ಚಿಂತೆಯಿಂದ ಹೊರಬರುವರು. ಮನೆಯಲ್ಲಿ ತಂದೆ ತಾಯಿ ಬೆಳಿಗ್ಗೆ ಸಂಜೆ 15 ,ನಿಮಿಷ ಧ್ಯಾನ ಮಾಡಿಸಬೇಕು. ಮಕ್ಕಳಿಗೆ ಎಷ್ಟು ಚಿಕ್ಕ ವಯಸ್ಸಿನಲ್ಲಿ ಧ್ಯಾನ ಮಾಡಿಸಲು ಪ್ರಾರಂಭಿಸುವಿರೋ ಅಷ್ಟೇ ಬೇಗ ಅಭಿವೃದ್ಧಿ ಹೊಂದುವರು. ಗುರು ಸಿಯಾಗ್ ಧ್ಯಾನ ಮಾಡುತ್ತಿರುವ ಮಕ್ಕಳೇ ಹೇಳುವಂತೆ ಮೊದಲಿಗಿಂತ ಈಗ ಮಾನಸಿಕ ಗೊಂದಲ , ಚಿಂತೆಯಿಂದ ಮುಕ್ತರಾಗಿದ್ದಾರೆ. ಪರೀಕ್ಷೆಯ ಮುಂಚೆ ಧ್ಯಾನ ,ಓದುವ ಮುಂಚೆ ಧ್ಯಾನ ಮಾಡಿದಾಗ ಶರೀರವನ್ನು ಶಾಂತಗೊಳಿಸುತ್ತದೆ.ಮಾಡುವ ಕಾರ್ಯದಲ್ಲಿ ಮನಸ್ಸು ಕೇಂದ್ರಿತಗೊಳ್ಳುತ್ತದೆ. ಮಾನಸಿಕ ಸಂತುಲತೆಯನ್ನು ಗಟ್ಟಿಗೊಳಿಸುತ್ತದೆ. ಮಕ್ಕಳು ಎಂತಹ ಕಷ್ಟ ಪರಿಸ್ಥಿತಿಯಲ್ಲೂ ಶಾಂತಿಯಿಮದ ಘಟನೆಯನ್ನು ಅವಲೋಕಿಸುವರು.ಭವಿಷ್ಯದ ಬಗ್ಗೆ ಉತ್ತಮ ನಿರ್ಣಯ ಕೈಗೊಳ್ಳುವ ಶಕ್ತಿ ಪಡೆಯುವರು.
ಮಕ್ಕಳಲ್ಲಿ ಹೊಸ ರೀತಿಯ ಆಲೋಚನೆ ಮಾಡುವ ಶಕ್ತಿ ಮತ್ತು ಸೃಜನಾತ್ಮಕತೆ ಬೆಳೆಯುತ್ತದೆ.
ಎಲ್ಲಾ ಕೆಲಸಗಳಲ್ಲೂ ವಿಶೇಷ ರೀತಿಯಲ್ಲಿ ಮಾಡುವ ಕೌಶಲ್ಯ ವಿಕಾಸವಾಗುತ್ತದೆ. ಗುರು ಸಿಯಾಗ್ ರವರ ಧ್ಯಾನವು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಒಳ್ಳೆಯ ಪ್ರಭಾವ ಬೀರುತ್ತದೆ. ಮಕ್ಕಳು ಸಂತೋಷ ಮತ್ತು ಆತ್ಮವಿಶ್ವಾಸಭರಿತರಾಗುತ್ತಾರೆ. ಕಷ್ಟಗಳಿಗೆ ಭಯಪಡುವ ಸ್ಥಿತಿ ಕೊನೆಯಾಗುವುದು. ಹೊಸ ವಿಚಾರಧಾರೆಗಳು ಬರಲು ಪ್ರಾರಂಭವಾಗುತ್ತದೆ. ಮಕ್ಕಳ ಸಂತೋಷದ ಮಾನಸಿಕ ಸ್ಥಿತಿಯು ಗಲಾಟೆ ಮಾಡುವ ಮತ್ತು ತುಂಟತನವನ್ನು ಕಡಿಮೆ ಮಾಡುವುದು. ಅಕ್ಕಪಕ್ಕದ ಜನರೊಂದಿಗೆ ಸರಿಯಾದ ವರ್ತನೆಯ ಬೆಳವಣಿಗೆಯಾಗುವುದು.
ಉಚ್ಛ ಚೇತನದ ವಿಕಾಸ
ಬೇರೆಯವರ ಬಗ್ಗೆ ಸಹಾನುಭೂತಿಯ ವಿಕಾಸ, ಇನ್ನೊಬ್ಬರೊಂದಿಗೆ ಒಳ್ಳೆಯ ವರ್ತನೆ ಕಂಡುಬರುತ್ತದೆ. ಅನ್ಯಾಯದ ವಿರುದ್ಧ ನಿಲ್ಲುವ ಕ್ಷಮತೆ , ದುರ್ಬಲರಲ್ಲಿ ದಯಾಪರತೆ ವೃದ್ದಿಯಾಗುವುದು. ಎಲ್ಲಾ ತಂದೆ ತಾಯಿಯರು ಮಕ್ಕಳಿಗೋಸ್ಕರ ಬದುಕುತ್ತಾರೆ, ಅವರ ಏಳಿಗೆಯನ್ನು ಬಯಸುತ್ತಾರೆ. ಹಿಂದೆ ಅವಿಭಕ್ತ ಕುಟುಂಬ ಹೆಚ್ಚು ಇದ್ದ ಕಾರಣ ಮಕ್ಕಳ ಭಾವನಾತ್ಮಕ ರೂಪ ಸರಿಯಾಗಿ ವಿಕಸಿತ ವಾಗುತಿತ್ತು. ಆದರೆ ಇಂದು ವಿಭಕ್ತ ಕುಟುಂಬದ ಕಾರಣ ತಂದೆ ತಾಯಿಗಳು ಸರಿಯಾದ ಸಂಸ್ಕಾರ ನೀಡಲಾಗುತ್ತಿಲ್ಲ. ಮಕ್ಕಳ ಸಲುವಾಗಿ ಸಮಯ ನೀಡಲಾಗುತ್ತಿಲ್ಲ. ಬಹಳ ವಿಶ್ರಾಂತ ರಹಿತ ಜೀವನವಾಗಿದೆ. ಮಕ್ಕಳ ಬಗ್ಗೆ ಸರಿಯಾದ ಗಮನ ನೀಡಲು ಆಗುವುದಿಲ್ಲ. ಆದರೆ ಗುರು ಸಿಯಾಗ್ ಧ್ಯಾನ ಮಕ್ಕಳು ತಮ್ಮ ಮಾರ್ಗದಿಂದ ವಿಚಲಿತರಾಗಲು ಬಿಡುವುದಿಲ್ಲ. ತಂದೆ ತಾಯಿಗಳು ಗುರು ಸಿಯಾಗ್ ರವರ ಧ್ಯಾನ ಮತ್ತು ಜಪ ಮಾಡುವ ಸಂಸ್ಕಾರ ಬೆಳೆಸಿದರೆ ಸಾಕು ನಂತರ ಕುಂಡಲಿನಿ ಶಕ್ತಿಯು ತಾನಾಗಿಯೇ ಸರಿಯಾದ ಮಾರ್ಗದಲ್ಲಿ ನಡೆಸುತ್ತದೆ. ನೀವು ಯಾವ ರೀತಿ ಮಕ್ಕಳನ್ನು ನೋಡಲು ಬಯಸುತ್ತೀರೊ ಆ ಎತ್ತರಕ್ಕೆ ಕೊಂಡೊಯ್ಯುತ್ತದೆ.
ಕ್ರೋಧ ಎಂದರೇನು?
ಕ್ರೋಧ ಎಂದರೇನು? ಕ್ರೋಧವನ್ನು ಏಕೆ ತಡೆಯಬೇಕು?
ಪರಿಸ್ಥಿತಿಗಳು ನಮ್ಮ ಇಚ್ಛೆಗೆ ವಿರುದ್ಧವಾಗಿದ್ದರೆ ನಿರಾಶೆ ಮತ್ತು ಕ್ರೋಧ ಉಂಟಾಗುವುದು. ನಮ್ಮ ಇಚ್ಛೆ ಈಡೇರದಿದ್ದರೆ ನಾವು ಎಷ್ಟು ಆತುರರಾಗಿರುತ್ತೇವೆ ಎಂದರೆ ನಮ್ಮೊಳಗಿನ ಶಕ್ತಿ ಅಗ್ನಿಯಾಗಿ ಪರಿವರ್ತನೆಯಾಗುತ್ತದೆ.ಆಗ ಆ ಕ್ರೋಧ ನಮ್ಮನ್ನು ಸುಡುತ್ತದೆ. ಗುರು ಸಿಯಾಗ್ ಹೇಳುವರು- ಮೃತ್ಯುವಿನ ನಂತರ ಶರೀರವನ್ನು ಸುಡಲಾಗುತ್ತದೆ. ನಂತರ ಅದು ಬೂದಿಯಾಗುತ್ತದೆ.ಆದರೆ ಕೋಪವು ಜೀವಂತವಿರುವಾಗಲೇ ಸುಡುತ್ತದೆ. ನಾವು ಸಿಟ್ಟಿನಿಂದ ನಮ್ಮ ವಿವೇಕವನ್ನು ಕಳೆದುಕೊಳ್ಳುತ್ತೇವೆ.ಕ್ರೋಧದಿಂದ ಮಾಡಿದ ಕೆಲಸ ಮತ್ತೆ ಸರಿಪಡಿಸಲಾಗದು. ಈ ಕಾರಣದಿಂದ ಉತ್ಪನ್ನವಾಗುವ ಕ್ರೋಧದಿಂದ ಜೀವನದಲ್ಲಿ ತಪ್ಪು ನಿರ್ಣಯ ಕೈಗೊಳ್ಳುವ ಸಂಭವ ಉಂಟಾಗುತ್ತದೆ. ವಿಶೇಷ ಪರಿಸ್ಥಿತಿಯಲ್ಲಿ ವೈದ್ಯರು ಸಿಟ್ಟಿನಿಂದ ಹೊರತರಲು ನಿದ್ರೆಯ ಮಾತ್ರೆ ಮತ್ತು ಮನಸನ್ನು ನಿಯಂತ್ರಿಸಲು ಔಷದಿಗಳನ್ನು ನೀಡುವರು. ಆದರೆ ಈ ಚಿಕಿತ್ಸೆಯು ಕಡಿಮೆ ಸಮಯದವರೆಗೆ ನಮಗೆ ಸಹಾಯಕವಾಗುವುದು.
ಆದರೆ ಕೋಪದ ಸಮಸ್ಯೆ ಪರಿಹಾರವಾಗುವುದಿಲ್ಲ. ಕೋಪವನ್ನು ಸ್ವಲ್ಪ ಸಮಯದವರೆಗೆ ಹೊರ ತಳ್ಳಲು ಪ್ರಯತ್ನಿಸಿ ಮತ್ತೆ ಅದನ್ನು ಒಳಗಡೆಗೆ ತಿರುಗಿಸಿಕೊಳ್ಳುವರು. ಕ್ರೋಧವು ಸಮಾಪ್ತಿಯಾಗುವುದಿಲ್ಲ. ನೀವು ಕೋಪವನ್ನು ಯಾವ ವ್ಯಕ್ತಿ ಮೇಲೆ ತೋರಿಸಿದರೆ ಆ ವ್ಯಕ್ತಿಯು ಶಾಂತವಾಗಿ ಅದನ್ನು ಸ್ವೀಕರಿಸುವುದಿಲ್ಲ. ಆ ವ್ಯಕ್ತಿಯ ಕೋಪ ನಿಮ್ಮ ಮೇಲೆ ಅಥವಾ ಬೇರೆಯವರ ಮೇಲೆ ತೋರ್ಪಡಿಸುತ್ತಾನೆ. ಕೋಪ ಶಾಂತವಾಗುವುದಿಲ್ಲ. ಕ್ರೋಧವು ಅಹಂಕಾರವಾಗಿ ಬದಲಾಗಿದೆ. ಕ್ರೋಧದ ಚಕ್ರದಿಂದ ಬಿಡಿಸಿಕೊಂಡು ಹೊರಬರಲಾಗುತ್ತಿಲ್ಲ.
ಈ ಚಕ್ರದಿಂದ ಹೇಗೆ ಹೊರಬರುವುದು. ಗುರುದೇವರು ಹೇಳುವಂತೆ ಕ್ರೋಧವನ್ನು ಸಂಪೂರ್ಣ ನಾಶಪಡಿಸಲು ಧ್ಯಾನಸಮುದ್ರದ ಅವಶ್ಯಕತೆ ಇದೆ. ಕೋಪದ ಕಾರಣ ಇನ್ನೊಬ್ಬರಲ್ಲಿ ಹುಡುಕದೇ ತನ್ನಲ್ಲಿ ಪರಿವೀಕ್ಷಿಸಿದರೆ ಕ್ರೋಧಕ್ಕೆ ಕಾರಣ ಒಂದು ಪ್ರಕಾರದ ಆವೇಗ ಅದರ ಬೇರು ನಮ್ಮಲ್ಲೆ ಇದೆ. ಧ್ಯಾನದಲ್ಲಿ ಬೇರೆಯವರ ಬಗ್ಗೆ ಕ್ರೋಧವಿರುವುದಿಲ್ಲ. ಕೋಪವು ಹೊರಗಿನ ಶಕ್ತಿಯಾಗಿದ್ದು ನೀವು ಅದನ್ನು ನಿಮ್ಮೊಳಗೆ ಬರಲು ಅನುಮತಿ ನೀಡಿದ್ದೀರಿ. ಯಾವಾಗ ಕೋಪ ನಮ್ಮೊಳಗೆ ಪ್ರವೇಶಿಸುತ್ತದೋ ಆಗ ವಿಶೇಷ ರೂಪ ಪಡೆಯುತ್ತದೆ. ಕೋಪವು ಬೇರೆಯವರ ಮೇಲೆ ತೋರ್ಪಡಿಸಿದಾಗ ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸುತ್ತದೆ. ಧ್ಯಾನದಿಂದ ಕೋಪ ಶಮನವಾಗುತ್ತದೆ. ಯಾವ ಕೋಪವು ನಿಮ್ಮ ಕಡೆ ಬರುವುದೋ ಅದನ್ನು ಬ್ರಹ್ಮಾಂಡದಲ್ಲಿ ಎಸೆದು ಬಿಡಿ. ಯಾವ ರೀತಿ ನದಿಯು ಸಮುದ್ರ ಸೇರಿದಾಗ ತನ್ನ ಸ್ವರೂಪ ಕಳೆದುಕೊಂಡು ಸಮುದ್ರವಾಗಿ ಬದಲಾಗುತ್ತದೋ ಅದೇ ರೀತಿ ಧ್ಯಾನದಲ್ಲಿ ಕೋಪವು ಹೊರಹೋಗಿ ಬ್ರಹ್ಮಾಂಡದಲ್ಲಿ ವಿಲೀನಹೋಗುತ್ತದೆ. ಅದು ಒಂದು ದಿನದಲ್ಲಿ ಆಗುವ ಕೆಲಸವಲ್ಲ. ಕೋಪ ಬಂದಾಗ ಧ್ಯಾನ ಮಾಡಲು ಆಗದಿದ್ದರೆ ನಾಮಜಪ ಮಾಡಿ. ಗುರುದೇವರು ಹೇಳುವಂತೆ ನಿಮಗೆ ಕೋಪದ ಮೊದಲ ತರಂಗ ಮನದಲ್ಲಿ ಆರಂಭವಾದ ತಕ್ಷಣ ಜಪ ಪ್ರಾರಂಭಿಸಿರಿ. ಮಂತ್ರ ಜಪದ ತರಂಗಗಳು ಕೋಪದ ತರಂಗಗಳನ್ನು ಕಡಿಮೆಗೊಳಿಸಿ ನಿಮ್ಮೊಳಗೆ ಪ್ರವೇಶಿಸುವುದನ್ನು ತಡೆಯುತ್ತದೆ.

