ಸಹಜವಾಗಿ ಮತ್ತು ಸುಲಭವಾಗಿ ಸಿದ್ಧಯೋಗದ ಮೂಲಕ ಆಧ್ಯಾತ್ಮಿಕ ಮಾರ್ಗದಲ್ಲಿ ಮುಂದುವರೆಯುತ್ತಿರುವ ದೇಶ ವಿದೇಶದ ಸಾಧಕರಿಗೆ ವೆಬ್ ಸೈಟ್ ರಚಿಸಲಾಗಿದೆ. ಗುರುದೇವರ ಜೊತೆಯಲ್ಲೇ ವರ್ಷಾನುಗಟ್ಟಲೇ ಇದ್ದು, ಗುರುಗಳ ಮಿಷನ್ ನ್ನು ನಡೆಸಿದ್ದಾರೋ ಅವರಿಂದ ಈ ವೆಬ್ ಸೈಟ್ ಮಾಡಲಾಗಿದೆ. ಈ ಶಿಷ್ಯರು ಗುರುದೇವರ ಜೊತೆ ಭಾರತ ಸೇರಿದಂತೆ ವಿದೇಶದೆಲ್ಲೆಡೆ ಗುರು ಸಿಯಾಗ್ ರವರ ಸಿದ್ಧಯೋಗ ಪ್ರಚಾರಕ್ಕೆ ಯಾತ್ರೆ ಕೈಗೊಂಡಿದ್ದಾರೆ. ದೇಶ ವಿದೇಶದ ಸಾಧಕರು ಕೇಳಿದ ಪ್ರಶ್ನೆಗಳಿಗೆ ಗುರುಗಳು ಸಹಜವಾದ ಸ್ಪಷ್ಟ ಉತ್ತರ ನೀಡಿದ್ದರು. ಇದರಿಂದ ಗುರುದೇವರ ಸಿದ್ಧಯೋಗ ದರ್ಶನವನ್ನು ಹತ್ತಿರದಿಂದ ತಿಳಿಯುವ ಅವಕಾಶ ದೊರೆಯಿತು. ಸಾಧನೆ ಮಾಡುತ್ತಿರುವವರ ಅನೇಕ ಪ್ರಶ್ನೆಗಳಿಗೆ ಉತ್ತರಿಸಲು, ಸಾಧನೆ ಮಾಡಲು ಇಚ್ಛೆಯಿರುವವರನ್ನು ಒಗ್ಗೂಡಿಸಲು ವೆಬ್ ಸೈಟ್ ಮಾಡಲಾಗಿದೆ. ಆಧ್ಯಾತ್ಮಿಕ ಮಾರ್ಗದಲ್ಲಿ ನಡೆಯಲು ಉತ್ಸಾಹ ಮೂಡಿಸುವುದು ಮತ್ತು ಸಾಧಕರ ಅನುಭವವನ್ನು ಪ್ರಕಟಿಸಲಾಗುವುದು. ಸಾಧಕರ ಅನುಭವಗಳು ಬದಲಾಗುತ್ತಿರುತ್ತದೆ. ಹೊಸ ಪ್ರಶ್ನೆಗೆ ಉತ್ತರ ನಿಧಾನವಾಗಿ ಸೇರಿಸಲಾಗುವುದು. ದೇಶ ವಿದೇಶದ ಸಾಧಕರು ವೆಬ್ ಸೈಟ್ ನಲ್ಲಿರುವ ಮಾಹಿತಿಯನ್ನು ತಮ್ಮ ಮಾತೃಭಾಷೆಗೆ ಅನುವಾದಿಸಿ ಪ್ರಕಟಿಸುತ್ತಿದ್ದಾರೆ. ಹೊಸ ಭಾಷೆಗಳು ಸೇರ್ಪಡೆಗೊಳ್ಳುತ್ತಾ ಹೋಗುತ್ತಿದೆ. www.gurusiyagyoga.org ವೆಬ್ ಸೈಟ್ ಪೂರ್ಣ ಸ್ವಾಧಿಕಾರವನ್ನು ಹೊಂದಿದೆ. ಯಾರ ಪ್ರಭಾವವೂ ಇರುವುದಿಲ್ಲ. ಈ ವೆಬ್ ಸೈಟ್ ದೇಶ ಮತ್ತು ವಿದೇಶದ ಯಾವ ಸಂಸ್ಥೆಯೊಂದಿಗೆ ಸಂಬಂಧ ಹೊಂದಿರುವುದಿಲ್ಲ. ಈ ವೆಬ್ ಸೈಟ್ ಸಿದ್ಧಯೋಗ ಪ್ರಚಾರಕ್ಕಾಗಿ ಯಾರಿಂದಲೂ ಧನ ಸಹಾಯ ಬೇಡುವುದಿಲ್ಲ. ಈ ವೆಬ್ ಸೈಟ್ ಸಂಚಾಲನೆ ಮಾಡುತ್ತಿರುವ ಶಿಷ್ಯರು ಯಾರಿಂದಲೂ ಆರ್ಥಿಕ ಸಹಾಯ ಅಥವಾ ಪ್ರಾಯೋಜಕತ್ವ ಪಡೆಯದೇ ನಡೆಸುತ್ತಿದ್ದಾರೆ. “ರಾಮ ನಾಮವನ್ನು ಮಾರಾಟ ಮಾಡಲಾಗುವುದಿಲ್ಲ” ಎಂಬ ಗುರು ಸಿಯಾಗ್ ರವರ ಮಾತಿನಂತೆ ಸಿದ್ಧಯೋಗವು ಸಂಪೂರ್ಣ ಉಚಿತವಾಗಿದೆ. ಸಿದ್ಧಯೋಗದ ಬಗ್ಗೆ ಯಾರಿಗೂ ಏಕಧಿಕಾರ ಇಲ್ಲ.