(ka) ಗುರು ಸಿಯಾಗ್ ಸಿದ್ಧಯೋಗ

ಕ್ರೋಧ ಎಂದರೇನು? ಕ್ರೋಧವನ್ನು ಏಕೆ ತಡೆಯಬೇಕು?

ಪರಿಸ್ಥಿತಿಗಳು ನಮ್ಮ ಇಚ್ಛೆಗೆ ವಿರುದ್ಧವಾಗಿದ್ದರೆ ನಿರಾಶೆ ಮತ್ತು ಕ್ರೋಧ ಉಂಟಾಗುವುದು. ನಮ್ಮ ಇಚ್ಛೆ ಈಡೇರದಿದ್ದರೆ  ನಾವು ಎಷ್ಟು ಆತುರರಾಗಿರುತ್ತೇವೆ ಎಂದರೆ ನಮ್ಮೊಳಗಿನ ಶಕ್ತಿ ಅಗ್ನಿಯಾಗಿ ಪರಿವರ್ತನೆಯಾಗುತ್ತದೆ.ಆಗ ಆ ಕ್ರೋಧ ನಮ್ಮನ್ನು ಸುಡುತ್ತದೆ. ಗುರು ಸಿಯಾಗ್ ಹೇಳುವರು- ಮೃತ್ಯುವಿನ ನಂತರ ಶರೀರವನ್ನು ಸುಡಲಾಗುತ್ತದೆ. ನಂತರ ಅದು ಬೂದಿಯಾಗುತ್ತದೆ.ಆದರೆ ಕೋಪವು ಜೀವಂತವಿರುವಾಗಲೇ ಸುಡುತ್ತದೆ. ನಾವು ಸಿಟ್ಟಿನಿಂದ ನಮ್ಮ ವಿವೇಕವನ್ನು ಕಳೆದುಕೊಳ್ಳುತ್ತೇವೆ.ಕ್ರೋಧದಿಂದ ಮಾಡಿದ ಕೆಲಸ ಮತ್ತೆ ಸರಿಪಡಿಸಲಾಗದು. ಈ ಕಾರಣದಿಂದ ಉತ್ಪನ್ನವಾಗುವ ಕ್ರೋಧದಿಂದ ಜೀವನದಲ್ಲಿ ತಪ್ಪು ನಿರ್ಣಯ ಕೈಗೊಳ್ಳುವ ಸಂಭವ ಉಂಟಾಗುತ್ತದೆ. ವಿಶೇಷ ಪರಿಸ್ಥಿತಿಯಲ್ಲಿ ವೈದ್ಯರು ಸಿಟ್ಟಿನಿಂದ ಹೊರತರಲು ನಿದ್ರೆಯ ಮಾತ್ರೆ ಮತ್ತು ಮನಸನ್ನು ನಿಯಂತ್ರಿಸಲು ಔಷದಿಗಳನ್ನು ನೀಡುವರು. ಆದರೆ ಈ ಚಿಕಿತ್ಸೆಯು ಕಡಿಮೆ ಸಮಯದವರೆಗೆ ನಮಗೆ ಸಹಾಯಕವಾಗುವುದು.

ಆದರೆ ಕೋಪದ ಸಮಸ್ಯೆ ಪರಿಹಾರವಾಗುವುದಿಲ್ಲ. ಕೋಪವನ್ನು ಸ್ವಲ್ಪ ಸಮಯದವರೆಗೆ ಹೊರ ತಳ್ಳಲು ಪ್ರಯತ್ನಿಸಿ ಮತ್ತೆ ಅದನ್ನು ಒಳಗಡೆಗೆ ತಿರುಗಿಸಿಕೊಳ್ಳುವರು. ಕ್ರೋಧವು ಸಮಾಪ್ತಿಯಾಗುವುದಿಲ್ಲ. ನೀವು ಕೋಪವನ್ನು ಯಾವ ವ್ಯಕ್ತಿ ಮೇಲೆ ತೋರಿಸಿದರೆ ಆ ವ್ಯಕ್ತಿಯು ಶಾಂತವಾಗಿ ಅದನ್ನು ಸ್ವೀಕರಿಸುವುದಿಲ್ಲ. ಆ ವ್ಯಕ್ತಿಯ ಕೋಪ ನಿಮ್ಮ ಮೇಲೆ ಅಥವಾ ಬೇರೆಯವರ ಮೇಲೆ ತೋರ್ಪಡಿಸುತ್ತಾನೆ. ಕೋಪ ಶಾಂತವಾಗುವುದಿಲ್ಲ. ಕ್ರೋಧವು ಅಹಂಕಾರವಾಗಿ ಬದಲಾಗಿದೆ. ಕ್ರೋಧದ ಚಕ್ರದಿಂದ ಬಿಡಿಸಿಕೊಂಡು ಹೊರಬರಲಾಗುತ್ತಿಲ್ಲ.

ಈ ಚಕ್ರದಿಂದ ಹೇಗೆ ಹೊರಬರುವುದು. ಗುರುದೇವರು ಹೇಳುವಂತೆ ಕ್ರೋಧವನ್ನು ಸಂಪೂರ್ಣ ನಾಶಪಡಿಸಲು ಧ್ಯಾನ‌ಸಮುದ್ರದ ಅವಶ್ಯಕತೆ ಇದೆ. ಕೋಪದ ಕಾರಣ ಇನ್ನೊಬ್ಬರಲ್ಲಿ‌ ಹುಡುಕದೇ ತನ್ನಲ್ಲಿ ಪರಿವೀಕ್ಷಿಸಿದರೆ ಕ್ರೋಧಕ್ಕೆ ಕಾರಣ ಒಂದು ಪ್ರಕಾರದ ಆವೇಗ ಅದರ ಬೇರು ನಮ್ಮಲ್ಲೆ ಇದೆ. ಧ್ಯಾನದಲ್ಲಿ‌ ಬೇರೆಯವರ ಬಗ್ಗೆ ಕ್ರೋಧವಿರುವುದಿಲ್ಲ. ಕೋಪವು ಹೊರಗಿನ ಶಕ್ತಿಯಾಗಿದ್ದು ನೀವು ಅದನ್ನು ನಿಮ್ಮೊಳಗೆ ಬರಲು ಅನುಮತಿ ನೀಡಿದ್ದೀರಿ. ಯಾವಾಗ ಕೋಪ ನಮ್ಮೊಳಗೆ ಪ್ರವೇಶಿಸುತ್ತದೋ ಆಗ ವಿಶೇಷ ರೂಪ ಪಡೆಯುತ್ತದೆ. ಕೋಪವು ಬೇರೆಯವರ ಮೇಲೆ ತೋರ್ಪಡಿಸಿದಾಗ ನಮ್ಮನ್ನು ಸಂಕಷ್ಟಕ್ಕೆ ಸಿಲುಕಿಸುತ್ತದೆ. ಧ್ಯಾನದಿಂದ ಕೋಪ ಶಮನವಾಗುತ್ತದೆ. ಯಾವ ಕೋಪವು ನಿಮ್ಮ ಕಡೆ ಬರುವುದೋ ಅದನ್ನು ಬ್ರಹ್ಮಾಂಡದಲ್ಲಿ ಎಸೆದು ಬಿಡಿ. ಯಾವ ರೀತಿ ನದಿಯು ಸಮುದ್ರ ಸೇರಿದಾಗ ತನ್ನ ಸ್ವರೂಪ ಕಳೆದುಕೊಂಡು ಸಮುದ್ರವಾಗಿ ಬದಲಾಗುತ್ತದೋ ಅದೇ ರೀತಿ ಧ್ಯಾನದಲ್ಲಿ ಕೋಪವು ಹೊರಹೋಗಿ ಬ್ರಹ್ಮಾಂಡದಲ್ಲಿ ವಿಲೀನಹೋಗುತ್ತದೆ. ಅದು ಒಂದು ದಿನದಲ್ಲಿ ಆಗುವ ಕೆಲಸವಲ್ಲ. ಕೋಪ ಬಂದಾಗ ಧ್ಯಾನ ಮಾಡಲು ಆಗದಿದ್ದರೆ ನಾಮಜಪ ಮಾಡಿ. ಗುರುದೇವರು ಹೇಳುವಂತೆ ನಿಮಗೆ ಕೋಪದ ಮೊದಲ ತರಂಗ ಮನದಲ್ಲಿ ಆರಂಭವಾದ ತಕ್ಷಣ ಜಪ ಪ್ರಾರಂಭಿಸಿರಿ. ಮಂತ್ರ ಜಪದ ತರಂಗಗಳು ಕೋಪದ ತರಂಗಗಳನ್ನು ಕಡಿಮೆಗೊಳಿಸಿ ನಿಮ್ಮೊಳಗೆ ಪ್ರವೇಶಿಸುವುದನ್ನು ತಡೆಯುತ್ತದೆ.

error: Content is protected !!