(ka) ಗುರು ಸಿಯಾಗ್ ಸಿದ್ಧಯೋಗ

ಗುರು ಸಿಯಾಗ್ ಸಿದ್ಧಯೋಗದಲ್ಲಿ ಧ್ಯಾನ ಮತ್ತು ಮಂತ್ರದ ಮಾನಸಿಕ ಜಪ ಮಾಡಲಾಗುತ್ತದೆ. ಸಿದ್ಧಯೋಗದಲ್ಲಿ ಸದ್ಗುರುವಿನ ಮೂಲಕ ಶಕ್ತಿಪಾತ ದೀಕ್ಷೆಯಿಂದ ನೀಡುವ ಮಂತ್ರವನ್ನು ಸಂಜೀವಿನಿ ಮಂತ್ರ ಎಂದು ಕರೆಯುತ್ತಾರೆ. ಸಂಜೀವಿನಿ ಮಂತ್ರ ಜಪದಿಂದ ಕುಂಡಲಿನಿ ಶಕ್ತಿ ಜಾಗೃತಗೊಳ್ಳಲು ಪ್ರಾರಂಭವಾಗುತ್ತದೆ. ಪ್ರಾಚೀನ ಕಾಲದಲ್ಲಿ ಗುರುಗಳು ಈ ಮಂತ್ರವನ್ನು ಜಪಿಸಿ ಸಾಧನೆಗೈದು ನಂತರ ಯೋಗ್ಯವಾದ ಶಿಷ್ಯನಿಗೆ ಮಂತ್ರವನ್ನು ನೀಡುತ್ತಿದ್ದರು. ನಂತರ ಆ ಶಿಷ್ಯನಿಂದ ಮುಂದೆ ಇನ್ನೊಬ್ಬ ಯೋಗ್ಯಮಯ ಸಾಧಕನಿಗೆ ವರ್ಗಾವಣೆಯಾಗುತಿತ್ತು. ಈ ಪ್ರಕಾರ ಮಂತ್ರದಲ್ಲಿ ಅನೇಕ ಗುರುಗಳ ತಪಸ್ಸಿನ ಶಕ್ತಿ ತುಂಬಿದೆ. ಆದರೆ ಈ ಯುಗದಲ್ಲಿ ಸಂಜೀವಿನಿ ಮಂತ್ರವನ್ನು ಪ್ರತಿಯೊಬ್ಬ ಮಾನವನ ಬಳಿ ತಲುಪಿಸುವುದು ಅವಶ್ಯಕವಾಗಿದೆ. ಧ್ಯಾನದ ವಿಧಾನ ಮತ್ತು ಮಂತ್ರ ಸಿದ್ದಯೋಗ ಅಂತರ್ಜಾಲದಲ್ಲಿ ಉಚಿತವಾಗಿ ಪಡೆಯಬಹುದು. www.gurusiyagyoga.org   ಧ್ಯಾನವನ್ನು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ 15 ನಿಮಿಷಗಳ ಕಾಲ ಮಾಡಬೇಕು. ನಿರಂತರವಾಗಿ ಯಾವಾಗಲೂ ಮನಸಿನಲ್ಲಿ ಮಂತ್ರ ಜಪ ಮಾಡುತ್ತಿರಬೇಕು. ನಿರಂತರವಾಗಿ ಮಂತ್ರ ಜಪಿಸುತಿದ್ದರೆ  ಮಂತ್ರ ತಾನೆ ತಾನಾಗಿ ನಮ್ಮೊಳಗೆ ಜಪಿಸಲು ಪ್ರಾರಂಭಿಸುತ್ತದೆ. ಇದಕ್ಕೆ ಅಜಪಾಜಪ ಎನ್ನುವರು. ಅಜಪಾಜಪವು ಸಾಧಕನ ಶ್ರದ್ದೆಯನ್ನು ಅವಲಂಬಿಸಿದೆ. ಸಿದ್ಧಯೋಗವು ಸಂಪೂರ್ಣ ಉಚಿತವಾಗಿದೆ.

error: Content is protected !!