(ka) ಗುರು ಸಿಯಾಗ್ ಸಿದ್ಧಯೋಗ

ಆಧುನಿಕ ಚಿಕಿತ್ಸಾ ವಿಧಾನದಂತೆಎರಡು ರೀತಿಯ ರೋಗಗಳಿವೆ. ಅವು ಶಾರೀರಿಕ ರೋಗಗಳು ಮತ್ತು ಮಾನಸಿಕ ರೋಗಗಳು.  ವೈದ್ಯರು ಬಾಹ್ಯವಾಗಿ ಅಥವಾ ಆಂತರಿಕವಾಗಿ ಆ ರೋಗಗಳಿಗೆ ಚಿಕಿತ್ಸೆ ನೀಡುತ್ತಾರೆ. ಪ್ರಾಚೀನ ಕಾಲದಲ್ಲಿ ಯೋಗಿಗಳು ಧ್ಯಾನದ ಅನುಭವದ ಆಧಾರದಲ್ಲಿ ಹೇಳಿರುವಂತೆ ” ಮಾನವನಿಗೆ ಖಾಯಿಲೆಗಳು ಅವನ ವರ್ತಮಾನ ಮತ್ತು ಭೂತಕಾಲದ ಕರ್ಮಗಳ ಫಲವಾಗಿ ಬರುತ್ತದೆ.” ಮಾನವನ ಪ್ರತಿ ಕರ್ಮಕ್ಕೂ ಅದರದೇ ಆದ ಫಲ ಇರುತ್ತದೆ. ಅದರ ಫಲ ಈ ಜನ್ಮ ಅಥವಾ ಮುಂದಿನ ಜನ್ಮದಲ್ಲಿ ಅನುಭವಿಸಬೇಕಾಗುವುದು. ಮಾನವನು ಜೀವನ- ಮರಣಗಳ ಚಕ್ರದಲ್ಲಿ ಬಂಧಿಯಾಗಿದ್ದಾನೆ. ಆತನಿಗೆ ಕರ್ಮದ ಆಧಾರದ ಮೇಲೆ ಜೀವನದ ಅನುಭವವಾಗುತ್ತದೆ. ಇದು ಪ್ರಕೃತಿಯ ನಿಯಮ‌.ವ್ಯಕ್ತಿ ಜನನ- ಮರಣಗಳ ಚಕ್ರದಲ್ಲಿ ಬಂಧಿಯಾಗಿದ್ದಾನೆ. ಗುರು ಸಿಯಾಗ್ ಸಿದ್ದಯೋಗದ ಆರಾಧನೆಯಿಂದ ಸಾಧಕ ಕರ್ಮ ಬಂಧನದಿಂದ ಮುಕ್ತನಾಗುತ್ತಾನೆ.ಸಹಜ ರೂಪದಲ್ಲಿ ಕಷ್ಟ ಪರಿಹಾರವಾಗುತ್ತಾ ಹೋಗುತ್ತದೆ. ಮುಂದೆ ಕೆಟ್ಟ ಕರ್ಮಗಳು ಮಾಡಲಾಗುವುದಿಲ್ಲ.  ಆತ್ಮಸಾಕ್ಷಾತ್ಕಾರವಾಗುವುದರಿಂದ ಸಾಧಕ ಕರ್ಮ ಫಲದ ಇಚ್ಛೆಯಿಂದ ಸಹಜವಾಗಿ ಮುಕ್ತನಾಗುತ್ತಾನೆ. ಪತಂಜಲಿ ಯೋಗಸೂತ್ರದಲ್ಲಿ ಶಾರೀರಿಕ , ಮಾನಸಿಕ ಮತ್ತು ಆಧ್ಯಾತ್ಮಿಕ ರೋಗಗಳ ಬಗ್ಗೆ ಹೇಳಿದ್ದಾರೆ. ಆಧ್ಯಾತ್ಮಿಕ ಸಮಸ್ಯೆಗಳಿಗೆ ಆಧ್ಯಾತ್ಮ ಚಿಕಿತ್ಸೆಯ ಅವಶ್ಯಕತೆಯಿದೆ. ನಿಯಮಿತ ಜಪ ಮತ್ತು ಧ್ಯಾನದಿಂದ ಆಧ್ಯಾತ್ಮಿಕ ರೋಗಗಳು ಗುಣವಾಗುವವು.

error: Content is protected !!