(ka) ಗುರು ಸಿಯಾಗ್ ಸಿದ್ಧಯೋಗ

ಪ್ರತಿ ಮಾನವನಲ್ಲಿ 3 ರೀತಿಯ ವೃತ್ತಿಗಳಿವೆ. ಸಾತ್ವಿಕ ( ಶುದ್ಧ, ಶಾಂತ, ಪ್ರಶಾಂತ), ರಾಜಸಿಕ( ಆವೇಶ ಪೂರ್ಣ, ತೀವ್ರ, ಕ್ರೋಧಶೀಲ),  ತಾಮಸಿಕ ಗುಣ( ನಿಷ್ಕ್ರಿಯ, ಆಲಸ್ಯ, ನಕರಾತ್ಮಕ, ಅಜ್ಞಾನ) . ಈ ವೃತ್ತಿಗಳು ವ್ಯಕ್ತಿಯ ವ್ಯಕ್ತಿತ್ವವನ್ನು ನಿರ್ದರಿಸುತ್ತವೆ. ವೃತ್ತಿಯ ಆಧಾರದಿಂದಲೇ ವ್ಯಕ್ತಿಯ ಜೀವನ ಮತ್ತು ಅದರ ಕರ್ಮಗಳು ರೂಪಿತವಾಗುತ್ತವೆ. ವ್ಯಕ್ತಿಯ ಊಟ ಉಪಚಾರ ವೃತ್ತಿಯ ಆಧಾರದಿಂದಾಗುತ್ತದೆ. ತಾಮಸಿಕ ವೃತ್ತಿಯ ವ್ಯಕ್ತಿಯಾದರೆ ನಶೆಯ ದಾಸನಾಗುತ್ತಾನೆ. ಧ್ಯಾನ ಮತ್ತು ನಾಮಜಪದಿಂದ ಮುನುಷ್ಯನ ವೃತ್ತಿ ಪರಿವರ್ತನೆಯಾಗುತ್ತದೆ. ಮನುಷ್ಯನಿಗೆ ನಿರಂತರ ನಾಮಜಪದಿಂದ ನಾಮದ ನಶೆ ಹತ್ತುವುದು. ಬೇರೆ ವಸ್ತುಗಳ ನಶೆಯು ದೂರವಾಗುತ್ತಾ ಹೋಗುತ್ತದೆ. ಇದರಿಂದ ನಶೆಯು ತಾನೆ ತಾನಾಗಿಯೆ ಸ್ವತಃ ದೂರವಾಗುತ್ತಾ ಹೋಗುತ್ತದೆ. ನಶೆಯು ನೀವು ಕೇಳುವುದಿಲ್ಲ.

ನಿಮ್ಮೊಳಗಿನ ತಾಮಸಿಕ ವೃತ್ತಿ ಕೇಳುವುದು. ಧ್ಯಾನದಲ್ಲಿ ತಾಮಸಿಕ ವೃತ್ತಿ ಸಾತ್ವಿಕ ವೃತ್ತಿಯಾಗಿ ಪರಿವರ್ತನೆಯಾಗುತ್ತದೆ.ಶರೀರದ ಅನುಪಯುಕ್ತ ಹಾನಿಕಾರಕ ವಸ್ತುಗಳು ತಾನೆ ತಾನಾಗಿ ದೂರವಾಗುತ್ತವೆ. ಈ ಸಂಬಂಧವಾಗಿ ಸ್ವಾಮಿ ವಿವೇಕಾನಂದರು ಅಮೆರಿಕಾದಲ್ಲಿ ಹೇಳಿದ್ದರು ” ತಾಮಸಿಕ ವಸ್ತುಗಳನ್ನು ನೀವು ಬಿಡಬೇಡಿ. ಅವೇ ನಿಮ್ಮ ನ್ನು ಬಿಟ್ಟು ಹೋಗುತ್ತವೆ. ಎಲ್ಲಾ ಪ್ರಕಾರದ ನಶೆಗಳಾದ ಮದ್ಯಪಾನ, ಅಫೀಮು, ಸಿಗರೇಟ್, ಗುಟ್ಕಾ ಮುಂತಾದವುಗಳು ಯಾವುದೆ ಪರಿಶ್ರಮವಿಲ್ಲದೆ ದೂರವಾಗುತ್ತವೆ. ಯಾವುದೇ ತಾಮಸಿಕ ಆಹಾರದ ಇಚ್ಚೆ ತಾನೆ ತಾನಾಗಿ ದೂರವಾಗುತ್ತದೆ. ಶರೀರದ ತೂಕ ಸಂತುಲತೆಯನ್ನು ಕಾಪಾಡುತ್ತದೆ. ಊಟ- ಉಪಚಾರ ನಿಮ್ಮ ನಿಯಂತ್ರಣಕ್ಕೆ ಬರುತ್ತದೆ. ಯಾವ ವಸ್ತುವನ್ನು ನೀವು ಬಿಡಬೇಕು ಎಂದೆನಿಸಿದರೆ ಧ್ಯಾನ ಮತ್ತು ಜಪ ಮಾಡಿ ಸ್ವತಃ ತಾನಾಗಿಯೇ ಬಿಡುತ್ತದೆ. ಇಂದು ವಿಶ್ವದಲ್ಲಿ ಮಾನಸಿಕ ಚಿಂತೆಯು ವ್ಯಾಪಕವಾಗಿದೆ.

ವಿಶ್ವದಾದ್ಯಂತ ಮನೋರೋಗಿಗಳ ಸಂಖ್ಯೆ ಹೆಚ್ಚಿದೆ‌. ಅದರಲ್ಲೂ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಆಧಿಕ. ಭೌತಿಕ ವಿಜ್ಞಾನದಲ್ಲಿ ಮಾನಸಿಕ ಚಿಂತೆಯನ್ನು ಶಾಂತಗೊಳಿಸುವ ಯಾವ ವಿಧಾನಗಳು ಇಲ್ಲ. ಭೌತಿಕ ವಿಜ್ಞಾನಿಗಳು  ಔಷಧಿಯ ನಶೆಯಿಂದ ಚಿಂತೆಯನ್ನು ದೂರಗೊಳಿಸಲು ಅಸಫಲ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ನಶೆ ಇಳಿಯುತ್ತಿದ್ದಂತೆ ಮತ್ತೆ ಅದೇ ರೀತಿಯ ಮಾನಸಿಕ ಸ್ಥಿತಿ ಇರುತ್ತದೆ. ಬೇರೊಂದು ರೋಗಗಳು ಬರುತ್ತವೆ. ಗುರು ಸಿಯಾಗ್ ಸಿದ್ದಯೋಗ ಮಾನಸಿಕ ಅಶಾಂತತೆ ಮತ್ತು ಚಿಂತೆಯನ್ನು ದೂರಮಾಡುವ ಕ್ರಿಯಾತ್ಮಕ ವಿಧಿಯನ್ನು ಹೇಳುತ್ತದೆ. ಭೌತಿಕ ವಿಜ್ಞಾನದಂತೆ ಭಾರತೀಯ ಯೋಗ ದರ್ಶನವು ಕೂಡ ನಶೆ ಯನ್ನು ಪೂರ್ಣ ಪರಿಹಾರ ಎಂದು ನಂಬುತ್ತದೆ. ಆದರೆ ನಶೆಯು ಭಗವಂತನ ನಾಮದ ನಶೆಯಾಗಿರಬೇಕು. ಯಾವುದೇ ಭೌತಿಕ ‌ಪದಾರ್ಥವಲ್ಲ.

error: Content is protected !!