(ka) ಗುರು ಸಿಯಾಗ್ ಸಿದ್ಧಯೋಗ

ಆರಾಮದಾಯಕ ಸ್ಥಿತಿಯಲ್ಲಿ ಯಾವ ದಿಕ್ಕಿಗಾದರೂ ಕುಳಿತುಕೊಳ್ಳಬೇಕು. ಚಾಪೆಯ ಮೇಲೆ, ಹುಲ್ಲಿನ ಜಮೀನಿನ ಮೇಲೆ, ಯೋಗ ಮ್ಯಾಟ್ ಮೇಲೆ ಎಲ್ಲಾದರೂ ಕುಳಿತುಕೊಳ್ಳಬಹುದು. ಕುಳಿತುಕೊಳ್ಳಲು‌ ಆಗದವರು ಕುರ್ಚಿ, ಸೋಫಾದ ಮೇಲೆ ಕುಳಿತುಕೊಳ್ಳಬಹುದು. ಯಾರಿಗೆ ಕುಳಿತುಕೊಳ್ಳಲು ಆಗುವುದಿಲ್ಲವೋ ಅವರು ಮಲಗಿಕೊಂಡೆ ಮಾಡಬಹುದು. ಶರೀರವನ್ನು ಸಡಿಲ ಮಾಡಿ ಕುಳಿತುಕೊಳ್ಳಬೇಕು. ಶರೀರವನ್ನು ಬಿಗಿ ಮಾಡಿ ಕುಳಿತುಕೊಳ್ಳಬೇಡಿ. ಶರೀರ ಸಡಿಲಗೊಳಿಸಿ ಕೂರುವುದರಿಂದ ಗಮನ ಶರೀರದ ಕಡೆ ಹೋಗದು.

ನಿಮ್ಮ ಕಣ್ಣುಗಳನ್ನು‌ ಮುಚ್ಚಿ  15. ನಿಮಿಷ ಧ್ಯಾನ ಮಾಡಿಸುವಂತೆ ಗುರುಗಳಲ್ಲಿ‌ ಪ್ರಾರ್ಥಿಸಿರಿ. ಹದಿನೈದು ನಿಮಿಷಗಳ ನಂತರ ಧ್ಯಾನದಿಂದ ಹೊರಬರುವಿರಿ. ಮೊದಮೊದಲು ಮಾಡುವವರು ಅವಶ್ಯವಿದ್ದರೆ ಅಲಾರಾಂ ಇಟ್ಟುಕೊಳ್ಳಿ. ಅಲಾರಾಂ ನ್ನು ಕಡಿಮೆ ಶಬ್ಧದಲ್ಲಿ ಇಟ್ಟುಕೊಳ್ಳಿ ಅದರಿಂದ ಧ್ಯಾನದಿಂದ ನಿಧಾನವಾಗಿ ಹೊರಬರಬಹುದು. ಗುರುದೇವರ ಚಿತ್ರ ಮನದಲ್ಲಿ ಮೂಡುವವರೆಗು ಸ್ವಲ್ಪ ಸಮಯದವರೆಗೆ ನೋಡುತ್ತಲಿರಿ. ನಂತರ ಕಣ್ಣುಗಳನ್ನು ಮುಚ್ಚಿ ಮನದಲ್ಲೇ ಗುರುದೇವ ಹದಿನೈದು ನಿಮಿಷದವರೆಗೆ ಧ್ಯಾನ ‌ಮಾಡಿಸುವಂತೆ ಪ್ರಾರ್ಥಿಸಿರಿ. ನಂತರ ಕಣ್ಣುಗಳನ್ನು ಮುಚ್ಚಿ  ಕಣ್ಣು ಹುಬ್ಬುಗಳ ಮಧ್ಯಭಾಗದಲ್ಲಿ ಗುರುದೇವ್ ಸಿಯಾಗ್ ರ ಚಿತ್ರವನ್ನು ಸ್ಮರಿಸಿರಿ.

ಗುರುದೇವರ ಚಿತ್ರವನ್ನು ಸ್ಮರಿಸುತ್ತಾ 15 ನಿಮಿಷಗಳ ಕಾಲ ಗುರುದೇವರು ನೀಡಿದ ಮಂತ್ರವನ್ನು ಮನಸಿನಲ್ಲಿ‌ ಜಪಿಸಿರಿ. ಯಾವುದೇ ಶಬ್ದ ಮಾಡದೇ ಹಲ್ಲು, ನಾಲಗೆ, ತುಟಿ ಅಲುಗಾಡಿಸದೇ ಜಪ ಮಾಡಬೇಕು. ಮಂತ್ರದ ಸರಿಯಾದ ಉಚ್ಛಾರಣೆಯನ್ನು ಮಧ್ಯಮ ಗತಿಯಲ್ಲಿ‌ ಜಪಿಸಬೇಕು. ತುಂಬಾ ನಿಧಾನ ಜಪ ಮಾಡಿದರೆ ಮನಸ್ಸು ಬೇರೆ ಕಡೆ ಹರಿದಾಡುತ್ತಿರುತ್ತದೆ. ತುಂಬಾ ವೇಗವಾಗಿ ಹೇಳಿದರೆ ಶಬ್ಧ ಉಚ್ಛಾರಣೆ ಸರಿಯಾಗುವುದಿಲ್ಲ. ಹದಿನೈದು ನಿಮಿಷದ ನಂತರ ಧ್ಯಾನದಿಂದ ಹೊರಬರುವಿರಿ. ಧ್ಯಾನದ ಸಮಯದಲ್ಲಿ‌ ಅವಶ್ಯಕತೆಗೆ ಅನುಸಾರ ಯೋಗಿಕ ಕ್ರಿಯೆಗಳು‌ ತಾನಾಗಿಯೇ ನಡೆಯಬಹುದು.

ಶರೀರದ ಅವಶ್ಯಕತೆಗನುಸಾರ ತಾನಾಗಿಯೇ ಕ್ರಿಯೆಗಳು ನಡೆಯುತ್ತವೆ. ಈ ಕ್ರಿಯೆಗಳು ವ್ಯಕ್ತಿಯ ಅವಶ್ಯಕತೆಗನುಸಾರ ಸ್ವತಃ ನಡೆಯುತ್ತವೆ. ಸಾಧಕರು ಈ ಕ್ರಿಯೆಗಳನ್ನು ನಿಲ್ಲಿಸಲು ಪ್ರಯತ್ನಪಡಬೇಡಿ. ಸಾಧಕರಿಗೆ ಕಂಪನ, ಕೆಲವರಿಗೆ ಪ್ರಕಾಶ, ಬಣ್ಣಗಳು ಕಂಡುಬರಬಹುದು. ಆಧ್ಯಾತ್ಮಿಕತೆಯಲ್ಲಿ ಮುಂದುವರೆಯುತ್ತಿರುವ ಲಕ್ಷಣಗಳಿವು. ಕೆಲವರಲ್ಲಿ ಈ ರೀತಿಯ ಕ್ರಿಯೆಗಳು ಅನುಭವಗಳು‌ ಆಗುವುದಿಲ್ಲ. ಅವರಿಗೆ ಆಧ್ಯಾತ್ಮಿಕ ವಿಕಾಸ ಮಾರ್ಗದಲ್ಲಿ ಈ ರೀತಿಯ ಕ್ರಿಯೆಗಳು ಅವಶ್ಯಕತೆ ಇರುವುದಿಲ್ಲ. ಧ್ಯಾನ ಪ್ರತಿದಿನ ಎರಡು ಬಾರಿ ಬೆಳಿಗ್ಗೆ‌ ಮತ್ತು ಸಂಜೆ ಮಾಡಬೇಕು.ಉಳಿದ ಸಮಯ ಮಾನಸಿಕ ಜಪ ಮಾಡುತ್ತಿರಬೇಕು.

error: Content is protected !!