(ka) ಗುರು ಸಿಯಾಗ್ ಸಿದ್ಧಯೋಗ

  • ಯಾವುದೇ ರೀತಿಯ ಪೂಜೆ, ಆರತಿ,ಹೋಮ ಹವನ, ತಿಥಿ, ವ್ರತ,ಉಪವಾಸ, ಮಠ ಮಂದಿರ, ತೀರ್ಥಕ್ಷೇತ್ರ, ದಿಕ್ಕು , ತೆಂಗಿನಕಾಯಿ ಪೂಜೆ, ಕಥೆ ಪ್ರವಚನ, ಕರ್ಮಕಾಂಡ ಆಚರಣೆಗಳು ಇರುವುದಿಲ್ಲ.
  • ಇಡೀ ವಿಶ್ವದಲ್ಲಿ ಗುರು ರಾಮ್ ಲಾಲ್ ಜಿ ಸಿಯಾಗ್ ರನ್ನು ನೋಡದೆ ಇದ್ದರೂ ಕೇವಲ ಫೋಟೊ ಮೂಲಕ ಧ್ಯಾನವಾಗುತ್ತದೆ.
  • ದೀಕ್ಷೆಗೋಸ್ಕರ ಗುರುದೇವರ ಬಳಿ ಹೋಗುವ ಅವಶ್ಯಕತೆ ಯಿಲ್ಲ.
  • ಮಂತ್ರ ದೀಕ್ಷೆ ಗುರುದೇವರ ವೀಡಿಯೊ ಆಡಿಯೋ , ಯು ಟ್ಯೂಬ್ ನಲ್ಲಿರುವ ವೀಡಿಯೋ , ಗುರುದೇವರ ಅಧಿಕೃತ ವೆಬ್‌ಸೈಟ್‌ನಲ್ಲಿ ಪಡೆಯಬಹುದಾಗಿದೆ.
  • ಮಂತ್ರ ಜಪವನ್ನು ಬೇರೆಯವರಿಗೋಸ್ಕರ ಅಂದರೆ ಧ್ಯಾನ ಮಾಡಲು ಅಶಕ್ತರಾದವರು, ಮಾನಸಿಕ ರೋಗಿಗಳು ಮುಂತಾದವರ ಪರವಾಗಿ ನೀವು ಮಾಡಬಹುದು.
  • ಯಾವುದೆ ರೀತಿಯ ತರಬೇತಿಯನ್ನು ಪಡೆಯುವ ಅವಶ್ಯಕತೆ ಯಿಲ್ಲ
  • ಗುರು ಸಿಯಾಗ್ ಸಿದ್ಧಯೋಗ ಮಾಡಲು ಯೋಗದ ಬಗ್ಗೆ ಯಾವುದೇ ರೀತಿಯ ಪ್ರಾರಂಭಿಕ ತಿಳುವಳಿಕೆ ಪಡೆಯುವ ಅವಶ್ಯಕತೆಯಿಲ್ಲ.
  • ಯಾವ ವಸ್ತುಗಳನ್ನು ಬಿಡಬೇಡಿ. ಯಾವ ವಸ್ತುಗಳು ನಿಮಗೆ ಯೋಗ್ಯವಲ್ಲವೋ ಅವುಗಳೇ ನಿಮ್ಮನ್ನು ಬಿಟ್ಟು ಹೋಗುತ್ತದೆ.
  • ಇಲ್ಲಿ ಏನನ್ನು ಕೊಡುವ ಮತ್ತು ತೆಗೆದುಕೊಳ್ಳುವಂತದ್ದು ಏನು ಇಲ್ಲ. ಸಿದ್ಧಯೋಗ ಸಂಪೂರ್ಣ ಉಚಿತವಾಗಿದೆ.
  • ಯಾವುದೇ ರೀತಿಯಲ್ಲಿ ಪಾಪ ಪುಣ್ಯ,‌ ಸ್ವರ್ಗ ನರಕಗಳ ಬಗ್ಗೆ ಹೇಳಿ ಭಯಪಡಿಸುವುದಿಲ್ಲ.
  • ಆಧ್ಯಾತ್ಮಿಕತೆಯ ಹೆಸರಿನಲ್ಲಿ ಯಾವುದೇ ರೀತಿಯ ಕಥೆ ಪ್ರವಚನ ಹೇಳುವ ಪರಿಪಾಠವಿಲ್ಲ.
  • ಯೋಗದ ಹೆಸರಿನಲ್ಲಿ ಯಾವುದೇ ರೀತಿಯ ಶಾರೀರಿಕ ಕಸರತ್ತು ಮಾಡಿಸುವುದಿಲ್ಲ.
  • ಯಾವುದೇ ರೀತಿಯ ಮಾತ್ರೆ ಮತ್ತು ಆಯುರ್ವೇದ ಔಷಧ ನೀಡಲಾಗುವುದಿಲ್ಲ.
error: Content is protected !!