ಸಿದ್ಧಯೋಗದಲ್ಲಿ ಕುಂಡಲಿನಿ ಜಾಗರಣೆ ಶಕ್ತಿಪಾತ ದೀಕ್ಷೆ ಮೂಲಕ ನಡೆಯುತ್ತದೆ. ಸಮರ್ಥ ಸದ್ಗುರುವಿನಿಂದ ಶಕ್ತಿಪಾತ ದೀಕ್ಷೆ 4 ಪ್ರಕಾರಗಳಲ್ಲಿ ಆಗುತ್ತದೆ. ಸ್ಪರ್ಶದಿಂದ, ದೃಷ್ಟಿಯಿಂದ , ಮಂತ್ರದಿಂದ ಮತ್ತು ದೃಢ ನಿಶ್ಚಯದಿಂದ. ಗುರು ಸಿಯಾಗ್ ಸಿದ್ಧಯೋಗದಲ್ಲಿ ಶಕ್ತಿಪಾತ ದೀಕ್ಷೆ ಸಂಜೀವಿನಿ ಮಂತ್ರದ ಮೂಲಕ ನಡೆಯುತ್ತದೆ. ಈ ಮಂತ್ರ ಕೇವಲ ಗುರು ಸಿಯಾಗ್ ರವರ ಧ್ವನಿಯಲ್ಲಿ ನೀಡುವುದಾಗಿದೆ. ಶಕ್ತಿಪಾತದ ಅರ್ಥ ಶಕ್ತಿಯ ಸಂಚರಣ (ವರ್ಗಾವಣೆ) ಮಾಡುವುದಾಗಿದೆ. ಗುರು ಸಿಯಾಗ್ ರವರ ದಿವ್ಯ ಮಂತ್ರ ವ್ಯಕ್ತಿಯ ಕುಂಡಲಿನಿ ಶಕ್ತಿಯನ್ನು ಜಾಗೃತಗೊಳಿಸುತ್ತದೆ. ಕುಂಡಲಿನಿಯನ್ನು ಶಿರಭಾಗದ ತುದಿಯ ಸಹಸ್ರಾರ ಚಕ್ರದವರೆಗೆ ಕೊಂಡೊಯ್ಯಲು ಸಾಧಕನು ಗುರುಗಳು ಹೇಳಿದ ಮಾರ್ಗವನ್ನು ಅನುಸರಿಸಬೇಕು. ಗುರು ಸಿಯಾಗ್ ಸಿದ್ಧಯೋಗ ನಾಥ ಮತದ ಕೊಡುಗೆಯಾಗಿದೆ. ಇದನ್ನು ಶಕ್ತಿಪಾತ ಎನ್ನುವರು. ಸಾಧಕನು ಮೊದಲು ಗುರುಗಳು ತಮ್ಮ ಶಕ್ತಿಯನ್ನು ನನಗೆ ವರ್ಗಾಯಿಸುತ್ತಾರೆ ಅಥವಾ ಗುರುಗಳು ಶಕ್ತಿಯನ್ನು ಹೊರಗಡೆಯಿಂದ ನನ್ನೊಳಗೆ ಹಾಕುತ್ತಾರೆ ಎಂದು ತಿಳಿದಿರುತ್ತಾರೆ. ಆದರೆ ಗುರು ಸಿಯಾಗ್ ಸಿದ್ದಯೋಗದ ಪ್ರಕಾರ ಕುಂಡಲಿನಿ ಶಕ್ತಿಯು ಪ್ರತಿಯೊಬ್ಬ ಮಾನವನಲ್ಲೂ ಸುಪ್ತಾವಸ್ಥೆಯಲ್ಲಿರುತ್ತದೆ. ಉಚ್ಚ ಆದ್ದರಿಂದ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಶಕ್ತಿಯ ವರ್ಗಾವಣೆ ಸಾಧ್ಯವಿಲ್ಲ. ಸಾಮಾನ್ಯ ಅರ್ಥದಲ್ಲಿ ಶಕ್ತಿಪಾತದ ಅರ್ಥ ಒಂದು ಉರಿಯುತ್ತಿರುವ ಹಣತೆಯಿಂದ ಇನ್ನೊಂದು ಹಣತೆಯನ್ನು ಹಚ್ಚುವುದು. ಪ್ರತಿಯೊಬ್ಬ ಮಾನವನು ಜನ್ಮದಿಂದಲೇ ಪೂರ್ಣನಾಗಿರುವನು. ನೀವು ಯಾವ ರೀತಿಯ ದೀಪವೆಂದರೆ ಎಣ್ಣೆಯು ಇರುತ್ತದೆ ಮತ್ತು ಬತ್ತಿಯು ಇರುತ್ತದೆ. ಆದರೆ ಪ್ರಕಾಶ ಮಾತ್ರ ಇರುವುದಿಲ್ಲ. ನಿಮಗೆ ಉರಿಯುತ್ತಿರುವ ದೀಪದ ಅವಶ್ಯಕತೆ ಮಾತ್ರ ಇದೆ. ಯಾವಾಗ ನೀವು ಆ ಪ್ರಕಾಶಿಸುತ್ತಿರುವ ದೀಪದ ಸಂಪರ್ಕಕ್ಕೆ ಬರುವಿರೊ ನೀವು ಪ್ರಕಾಶಿಸಲು ಪ್ರಾರಂಭಿಸುವಿರಿ. ಇದೇ ಗುರು ಸಿಯಾಗ್ ಸಿದ್ದಯೋಗದ ನಿಜವಾದ ಶಕ್ತಿಪಾತ.