ಇದು ಸಂಸಾರದಲ್ಲಿದ್ದುಕೊಂಡೆ ಮೋಕ್ಷ ಪಡೆಯುವ , ನರನಿಂದ ನಾರಾಯಣನಾಗಿ ದಿವ್ಯ ರೂಪಾಂತರಗೊಳ್ಳುವ ಮಾರ್ಗವಾಗಿದೆ. ಆತ್ಮನಿಂದ ಪರಮಾತ್ಮನೊಂದಿಗಿನ ಮಿಲನದ ದಾರಿಯಾಗಿರುವುದರಿಂದ ಎಲ್ಲಾ ಪ್ರಕಾರದ ರೋಗಗಳು, ನಶೆಗಳು , ಚಿಂತೆಗಳು ತಾನಾಗಿಯೇ ದೂರವಾಗುವವು. ಇದು ಪತಂಜಲಿ ಮಹರ್ಷಿಗಳ ಅಷ್ಟಾಂಗ ಯೋಗದ ಸಾಕ್ಷಾತ್ಕಾರವನ್ನು ಅತ್ಯಂತ ಸಹಜವಾಗಿ ಮಾಡಿಸುವುದು. ಸ್ವಲ್ಪ ದಿನಗಳ ಆರಾಧನೆಯ ಬಳಿಕ ಮಂತ್ರವು ತಾನೆ ತಾನಾಗಿ ಜಪಿಸಲು ಪ್ರಾರಂಭವಾಗುತ್ತದೆ. ಇದನ್ನು ಅಜಪಾಜಪ ಎನ್ನುವರು. ಆಧ್ಯಾತ್ಮಿಕ ವಿಕಾಸದ ಒಂದು ಹಂತದಲ್ಲಿ ನಾದ ಕೇಳಿಸಲು ಪ್ರಾರಂಭವಾಗುತ್ತದೆ. ಆಗ ಗೃಹಸ್ಥ ಜೀವನದಲ್ಲಿದ್ದರೂ ಪರಮ ಶಾಂತಿಯ ಅನುಭವವಾಗುತ್ತದೆ. ಸಿದ್ಧಯೋಗದಲ್ಲಿ ಸಾಧಕನಿಗೆ ಅನೇಕ ಸಿದ್ಧಿಗಳು ಆಗುವವು. ಸಾಧಕನಿಗೆ ಭೂತ ಮತ್ತು ಭವಿಷ್ಯದ ದರ್ಶನವಾಗುತ್ತದೆ. ಹಲವು ಸಾಧಕರಿಗೆ ಖೇಚರಿ ಮುದ್ರೆ ಆಗುವುದು. ನಾಲಿಗೆಯು ಸಂಪೂರ್ಣ ಹಿಂದಕ್ಕೆ ಚಾಚುವುದು ಅಲ್ಲಿಂದ ರಸವು ಜಿನುಗುವುದು. ಇದಕ್ಕೆ ಅಮೃತ ಎಂದು ಕರೆದಿದ್ದಾರೆ. ಇದರಿಂದ ಅಸಾಧ್ಯ ರೋಗಗಳು ಗುಣಮುಖವಾಗುವುದು. ಹಲವು ಸಾಧಕರಿಗೆ ಖೇಚರಿ ಮುದ್ರೆ ಆಗುವುದು. ನಾಲಿಗೆಯು ಪೂರ್ಣವಾಗಿ ಹಿಂದಕ್ಕೆ ಚಾಚಿ ನಿರ್ದಿಷ್ಟ ಬಿಂದುವನ್ನು ತಲುಪುವುದು, ಆಗ ಅಲ್ಲಿಂದ ರಸವು ಜಿನುಗುವುದು. ಈ ರಸವನ್ನೇ ಅಮೃತ ಎಂದು ಕರೆದಿದ್ದಾರೆ. ಇದರಿಂದ ಅನೇಕ ರೋಗಗಳು ಗುಣಮುಖವಾಗುವವು. ಸಿದ್ಧಯೋಗದಿಂದ ವೃತ್ತಿ ಪರಿವರ್ತನೆಯಾಗಿ ವ್ಯಕ್ತಿತ್ವದ ರೂಪಾಂತರಣಗೊಳ್ಳಲು ಪ್ರಾರಂಭವಾಗುತ್ತದೆ. ನಿರಂತರ ಆಳವಾದ ಸಾಧನೆಯಿಂದ ಸಂಸಾರದಲ್ಲಿದ್ದುಕೊಂಡೆ ಮೋಕ್ಷದ ಅವಸ್ಥೆ ಪ್ರಾಪ್ತಿಯಾಗುತ್ತದೆ.